janadhvani

Kannada Online News Paper

ಬಾಹ್ಯಾಕಾಶದತ್ತ ಪವಿತ್ರ ಖುರ್‌ಆನ್‌ ನೊಂದಿಗೆ ಹಝ್ಝ ಅಲ್ ಮನ್ಸೂರಿ

ದುಬೈ: ಬಾಹ್ಯಾಕಾಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸುಕೊಳ್ಳುವ 19 ನೇ ದೇಶವಾಗಿ ಯುಎಇ ಹೊರ ಹೊಮ್ಮಲಿದೆ. ಗಗನಯಾತ್ರಿಕ ಹಝ್ಝ ಅಲ್ ಮನ್ಸೂರಿ ಮುಂದಿನ ತಿಂಗಳು 25 ರಂದು ಸಂಜೆ 5.56 ಕ್ಕೆ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳಸಲಿದ್ದಾರೆ.

ಕಝಕಿಸ್ತಾನದ ಬೈಕನ್ನೂರ್ ಕೋಸ್ಮೋ ಡ್ರೋಮಿನಿಂದ ಸೋಯುಸ್ 15 ಎಂಬ ನೌಕೆಯಲ್ಲಿ ಅವರು ತೆರಳಲಿದ್ದಾರೆ. ರಷ್ಯಾದ ಕಮಾಂಡರ್ ಒಲೆಗ್ ಸ್ಕ್ರಿಪೊಷ್ಕಾ ಮತ್ತು ಯುಎಸ್ ಜೆಸ್ಸಿಕಾ ಮೀರ್ ಸಹಯಾತ್ರಿಕರಾಗಲಿದ್ದು, ಅಕ್ಟೋಬರ್ 4 ರಂದು ಐಎಸ್ಎಸ್ನಿಂದ ಹಿಂತಿರುಗಲಿದ್ದಾರೆ. ಸೋಯೂಸ್ ಬಾಹ್ಯಾಕಾಶ ನೌಕೆಯು 7.48 ಮೀಟರ್ ಉದ್ದ ಮತ್ತು 2.71 ಮೀಟರ್ ವ್ಯಾಸವನ್ನು ಹೊಂದಿದೆ. ಆರು ಗಂಟೆಗಳಲ್ಲಿ ಬಾಹ್ಯಾಕಾಶ ನೌಕೆ ತಲುಪುವ ನಿರೀಕ್ಷೆಯಿದೆ.

ಹಝ್ಝ ಅಲ್ ಮನ್ಸೂರಿ ಮತ್ತು ಅವರ ಬದಲಿ ಸುಲ್ತಾನ್ ಅಲ್-ನಯಾದಿ ಅಂತಿಮ ಹಂತದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದರು. ತುರ್ತು ಪರಿಸ್ಥಿತಿ ಎದುರಾದಲ್ಲಿ ಹಾಸಾ ಹೊರಡಲು ಸಾಧ್ಯವಾಗದಿದ್ದರೆ ಅಲ್-ನಯಾದಿ ಅವರನ್ನು ಪರಿಗಣಿಸಲಾಗುವುದು.

ಮುಹಮ್ಮದ್ ಬಿನ್ ರಾಶಿದ್ ಬಾಹ್ಯಾಕಾಶ ಕೇಂದ್ರದ ಸಹಾಯಕ ಮಹಾನಿರ್ದೇಶಕ ಸಲೀಮ್ ಅಲ್-ಮುರ್ರಿ ಮಾತನಾಡಿ, ಯುಎಇಯು ಬಾಹ್ಯಾಕಾಶ ಕೇಂದ್ರವನ್ನು ಹೊಂದಿರುವ 19 ನೇ ದೇಶವಾಗಲು ತಯಾರಿ ನಡೆಸುತ್ತಿದೆ. 18 ದೇಶಗಳಿಂದ 230 ಕ್ಕೂ ಹೆಚ್ಚು ಪ್ರಯಾಣಿಕರು ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿದ್ದಾರೆ ಎಂದರು.

ಪವಿತ್ರ ಗ್ರಂಥದೊಂದಿಗೆ ಹೆಮ್ಮೆಯ ಪ್ರಯಾಣ

ಪವಿತ್ರ ಕುರ್‌ಆನ್‌ನೊಂದಿಗೆ ಬಾಹ್ಯಾಕಾಶ ಕೇಂದ್ರಕ್ಕೆ ಹಝ್ಝ ಅಲ್ ಮನ್ಸೂರಿ ಪ್ರಯಾಣ ಬೆಳೆಸಲಿದ್ದಾರೆ. ರೇಷ್ಮೆಯಿಂದ ತಯಾರಿಸಿದ ಯುಎಇಯ ಧ್ವಜ, ಅಧ್ಯಕ್ಷ ಶೈಖ್ ಝಾಯಿದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅಪೊಲೊ 17 ತಂಡದೊಂದಿಗೆ ನಿಂತಿರುವ ಪೋಟೊ, ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಖ್ತೂಮಿಯ ಆತ್ಮಕಥೆ ‘ಕಿಸ್ಸತೀ’ ಸ್ವದೇಶೀ ಆಹಾರ, ಕುಟುಂಬದ ಫೋಟೊ, ಅಗತ್ಯ ಸಾಮಾಗ್ರಿಗಳು ಮತ್ತು ಗಾಫ್ ಮರದ 30 ಬೀಜಗಳನ್ನು ಕೂಡ ಕೊಂಡೊಯ್ಯಲಾಗುತ್ತದೆ.