janadhvani

Kannada Online News Paper

ರಾಜ್ಯ SYS ಸದಸ್ಯತ್ವ ಅಭಿಯಾನಕ್ಕೆ ಪುತ್ತೂರಿನಲ್ಲಿ ವಿಧ್ಯುಕ್ತ ಚಾಲನೆ

ಪುತ್ತೂರು: ಸುನ್ನೀ ಯುವಜನ ಸಂಘ ಇದರ ರಾಜ್ಯಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಪುತ್ತೂರು ಸುನ್ನೀ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ಬನ್ನೂರು ಸಯ್ಯಿದ್ ಉಮರ್ ಅಲ್ ಹಾದಿ ತಂಙಳ್ ಅವರಿಂದ ಸದಸ್ಯತ್ವ ಅಪೇಕ್ಷೆ ಸ್ವೀಕರಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಚಾಲನೆ ನೀಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ಉಪಾಧ್ಯಕ್ಷ ಅಬೂಸುಫ್ಯಾನ್ ಮದನಿ, ಸುನ್ನೀ ಕೋರ್ಡಿನೇಶನ್ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, SYS ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮುಂತಾದವರು ಉಪಸ್ಥಿತರಿದ್ದರು.