janadhvani

Kannada Online News Paper

ಮಂಗಳೂರು ಬಿಟ್ಟು ಬೇರೇನೂ ತಿಳಿಯದ ನಳಿನ್‌ ಕುಮಾರ್‌ ಬಿಜೆಪಿ ಅಧ್ಯಕ್ಷ – ಈಶ್ವರಪ್ಪ ಹೇಳಿದ್ದೇನು?

ವಿಜಯಪುರ: ಮಂಗಳೂರು ಬಿಟ್ಟು ಬೇರೆ ಜಿಲ್ಲೆಗಳೇ ತಿಳಿಯದ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂಬ ಅವರದ್ದೇ ಪಕ್ಷದ ನಾಯಕರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನಳಿನ್ ಕುಮಾರ ಕಟೀಲ್ ನೇಮಕಗೊಂಡಿದ್ದಾರೆ. ಅವರು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ಅವರಿಗೆ ರಾಜ್ಯದ ಎಲ್ಲಾ ಭಾಗಗಳ ಪರಿಚಯ ಇಲ್ಲದಿದ್ದರೂ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ. ಅಮಿತ್ ಶಾ ಅವರೇನು ಇಡೀ ದೇಶ ಸುತ್ತಿದ್ದರಾ, ಅವರು‌ ದೇಶದ ಎಲ್ಲ ಜನರಿಗೂ ಗೊತ್ತಿಲ್ಲವೇ?’ ಎಂದೂ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಅವರ ಮಾತನ್ನು ಕೇಳಿ ರಾಜ್ಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡುವ ಅವಶ್ಯಕತೆ ನಮಗಿಲ್ಲ. ಅವರು ನಮ್ಮ ಪಕ್ಷದಲ್ಲೇ ಇದ್ದುಕೊಂಡು ಈ ರೀತಿಯ ಹೇಳಿಕೆ ಕೊಡಬಾರದು. ಈ ಹಿಂದೆ ಹಲವು ಬಾರಿ ತಿಳಿವಳಿಕೆ ಹೇಳಿದ್ದೇನೆ. ಆದರೂ ಕೇಳುತ್ತಿಲ್ಲ. ದೇವರು ಆದಷ್ಟು ಬೇಗ ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದರು.