ಪುತ್ತೂರು,ಆ.21 :-ಶೈಖುನಾ ಉಕ್ಕುಡ ಉಸ್ತಾದ್ ಅಬ್ದುರ್ರಹ್ಮಾನ್ ಫೈಝಿ ಕರ್ನೂರು ರವರ ಶಿಷ್ಯ ವೃಂದದ ಸಂಘಟನೆ ರೌಳತುಲ್ ಉಲೂಂ ಓಳ್ಡ್ ಸ್ಟೂಡೆಂಟ್ಸ್ ಉಕ್ಕುಡ ಇದರ ವತಿಯಿಂದ ಸ್ನೇಹ ಸಂಗಮ ಮತ್ತು ಶರಫುಲ್ ಉಲಮಾ ಅನುಸ್ಮರಣೆ ಬನ್ನೂರು ಮದ್ರಸ ಹಾಲ್ ನಲ್ಲಿ ಸೆಯ್ಯಿದ್ ಉಮರ್ ತಂಙಳ್ ಬನ್ನೂರು ರವರ ದುಅಃ ದೊಂದಿಗೆ ಮೂಸ ಸಖಾಫಿಯ ಅಧ್ಯಕ್ಷತೆಯಲ್ಲಿ ಬನ್ನೂರು ಜುಮಾ ಮಸೀದಿ ಅಧ್ಯಕ್ಷ ಮ್ಯೊದು ಹಾಜಿ ಬನ್ನೂರು ರವರ ಉಪಸ್ಥಿತಿ ಯಲ್ಲಿ ನಡೆಯಿತು.
ಬನ್ನೂರು ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಅಬೂ ಹನ್ನತ್ ಮುಹಮ್ಮದ್ ಸಖಾಫಿ ನೆಲ್ಯಾಡಿ, ಬಾತಿಷ ಸಖಾಫಿ ಮಾದಪುರ, ಅಬ್ದುಲ್ ರಹ್ಮಾನ್ ಸಖಾಫಿ ಊಕ್ಕಿನಡ್ಕ, ಎಸ್ ಜೆ ಎಂ ಪುತ್ತೂರು ರೇಂಜ್ ಅಧ್ಯಕ್ಷ ಮುಹಮ್ಮದ್ ಶರೀಫ್ ಸಖಾಫಿ ಸತ್ತಿಕ್ಕಳ್, ಮುಹಮ್ಮದ್ ಅಲಿ ಸಖಾಫಿ ಮಾದಪುರ, ಅಬೂಬಕ್ಕರ್ ಝುಹ್ರಿ ಕೊಟ್ಟುಂಬೆ ಮುಂತಾದವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.
ಉಕ್ಕುಡ ಉಸ್ತಾದ್ ರವರ ಶಿಷ್ಯಂದಿರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.ಪ್ರ ಕಾರ್ಯದರ್ಶಿ ಅಬ್ದುಲ್ ರಝಾಖ್ ಲತೀಫಿ ಕುಂತೂರು ಸ್ವಾಗತಿಸಿ ಶಮೀರ್ ಸಖಾಫಿ ಗರ್ಗಂದೂರು ವಂದಿಸಿದರು.
Pls add mi