ಮಂಗಳೂರು : ಬೆಳ್ತಂಗಡಿ ತಾಲ್ಲೂಕಿಗೊಳಪಟ್ಟ ಜಾರಿಗೆಬೈಲು ನಿವಾಸಿಯಾದ ಅಮಾಯಕರಾದ ರವೂಫ್ ಮುಸ್ಲಿಯಾರ್ ಮೇಲೆ ಭಯೋತ್ಪಾದನೆಯ ಸುಳ್ಳು ಅರೋಪವನ್ನು ಹೊರಿಸಿ ಅವರನ್ನು ತೇಜೋವಧೆಗೈದ ಮಾಧ್ಯಮವರ್ಗದ ನಿಲುವು ಖಂಡನೀಯವಾಗಿದೆ.
ನೈಜತೆಯನ್ನು ಬಿತ್ತರಿಸಬೇಕಾದ ಒಂದು ವರ್ಗವೇ ಅಮಾಯಕ ವ್ಯಕ್ತಿಗಳಿಗೆ ಏಕಾಏಕಿ ಉಗ್ರಪಟ್ಟ ಕಟ್ಟುತ್ತಿರುವಾಗ ಇದನ್ನು ನೋಡಿಯೂ ಕೈಕಟ್ಟಿ ಕುಳಿತರೆ ನಾಳೆ ನಮ್ಮವರಿಗೂ ಇಂತಹ ಸ್ಥಿತಿ ಬಂದರೆ ಅಚ್ಚರಿಪಡಬೇಕಾಗಿಲ್ಲ.!
ಆದ್ದರಿಂದ ಮಾದ್ಯಮವರ್ಗದ ಈ ಕೌರ್ಯವನ್ನು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಖಂಡಿಸುತ್ತಿದ್ದು, ನೈಜ ಅಪರಾಧಿಗಳಾದ ಮಾಧ್ಯಮಗಳ ವಿರುದ್ಧ ಸರಕಾರವು ಕಾನೂನು ಕ್ರಮ ಕೈಗೊಳ್ಳುವ ಮೂಲಕ ನಿರಪರಾಧಿಗೆ ನ್ಯಾಯ ಸಿಗುವಂತಾಗಬೇಕೆಂದು ಅದು ಒತ್ತಾಯ ಪಡಿಸಿದೆ.
ಅಶ್ರಪ್ ಕಿನಾರ(SჄS ಜಿಲ್ಲಾ ಪ್ರ. ಕಾರ್ಯದರ್ಶಿ )