ದಮ್ಮಾಮ್: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ,ಮಂಜನಾಡಿ ಇದರ ದಮ್ಮಾಮ್ ವಲಯ ಸಮಿತಿಯ ಮಹಾ ಸಭೆಯು ದಿನಾಂಕ 8/8/2019 ರಂದು ಅಲ್ ಮದೀನಾ ದಮ್ಮಾಮ್ ಹಾಲ್ ನಲ್ಲಿ ರಾಷ್ಟ್ರೀಯ ಅಧ್ಯಕ್ಷ ರಾದ N.S.ಅಬ್ದುಲ್ಲಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಬ್ಬಲ್ ರಝಾಕ್ ಸಖಾಫಿ ಉಸ್ತಾದ್ ರವರು ದುವಾದೊಂದಿಗೆ ಹೈದರ್ ನಯಿಮಿ ಉಸ್ತಾದ್ ರವರು ಕಿರಾತ್ ಪಠಿಸಿ, ರಾಷ್ಟ್ರೀಯ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರ್ ರವರು ಸ್ವಾಗತಿಸಿದರು. ಉದ್ಘಾಟನೆಯನ್ನು ಇಝಿದ್ದೀನ್ ಮುಸ್ಲಿಯಾರ್ ನಿರ್ವಹಿಸಿದರು. ಅಬೂಬಕ್ಕರ್ ಮದನಿ ಜುಬೈಲ್ ಹಿತವಚನ ನೀಡಿದರು.
ಕೆ.ಪಿ.ಅಬ್ದುಲ್ಲಾ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಚುನಾವಣಾಧಿಕಾರಿಯಾಗಿ ಭಾಗವಹಿಸಿ 2019 /2020 ನೇ ಸಾಲಿನ ಕಮಿಟಿಯನ್ನು ರಚಿಸಿದರು.
ಅಧ್ಯಕ್ಷರಾಗಿ :ಉಸ್ಮಾನ್ ಮಂಜನಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಪಡಿಕ್ಕಲ್, ಕೋಶಾಧಿಕಾರಿಯಾಗಿ :ರಹೀಂ ಉಚ್ಚಿಲ.
ಉಪಾಧ್ಯಕ್ಷರು:ಮೂಸ ಹಾಜಿ, ಅಬೂಬಕ್ಕರ್ ಮದನಿ. ಖಾಸಿಂ ಅಡ್ಡೂರ್
ಕಾರ್ಯದರ್ಶಿಗಳು :ಇಕ್ಬಾಲ್ ಕೈರಂಗಳ,ಅನ್ವರ್ ಪಡಿಬಿದ್ರೆ, ಲೆಕ್ಕ ಪರಿಶೋಧಕರಾಗಿ :ಅಶ್ರಫ್ ನಾವುಂದ.
ಸಲಹೆಗಾರರಾಗಿ :ಇಸ್ಮಾಯಿಲ್ ಪೊಯ್ಯಲ್, ಬಶೀರ್ ತೋಟಾಲ್, ಬಾಬಾ ಲತೀಫ್, ಅಬ್ದುಲ್ ರಝಾಕ್ ಸಖಾಫಿ ಹಾಗೂ 21 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸೌದಿಗೆ ವಿದಾಯ ಹೇಳಿ ಊರಿಗೆ ತೆರಳುತ್ತಿರಿವ ವಲಯದ ಮಾಜಿ ಅಧ್ಯಕ್ಷರಾದ ಜನಾಬ್ ಇಝುದ್ದೀನ್ ಮುಸ್ಲಿಯಾರಿಗೆ ವಲಯ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕೊನೆಯಲ್ಲಿ ಇಬ್ರಾಹಿಂ ಪಡಿಕ್ಕಲ್ ಧನ್ಯವಾದ ಸಲ್ಲಿಸಿದರು.