ಇಂದು ಅದೆಷ್ಟೋ ಜೀವಗಳಿಗೆ ಜೀವನಾಡಿಯಾಗಿರುವ,ಆಸ್ಪತ್ರೆಗಳಲ್ಲಿ ಜೀವನ್ಮರಣದ ಮಧ್ಯೆ ಹೋರಾಡುವ ಅದೆಷ್ಟೋ ಜೀವಗಳಿಗೆ ಜೀವದಾನ ನೀಡಿದ ರಕ್ತದಾನ ಎಂಬ ಶಿಬಿರ ಯಶಸ್ವಿಯಾಗಿ ದ.ಕ.ಜಿಲ್ಲೆಯಾದ್ಯಂತ ಕಾರ್ಯಾಚರಿಸಿ ಮನುಷ್ಯ ಮನಸ್ಸುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ… ಅಲ್-ಹಂದುಲಿಲ್ಲಾಹ್.
ಹೌದು…ಇಲ್ಲಿ ಆ ಜಾತಿ ಈ ಜಾತಿ, ಹಿರಿಯ-ಕಿರಿಯ, ಬಡವ ಬಲ್ಲಿದ,ಬಿಳಿಯ-ಕರಿಯ,ಮೇಲ್ಜಾತಿ-ಕೀಳ್ಜಾತಿ ಎಂಬ ಯಾವೊಂದು ಭೇದ-ಭಾವವನ್ನು ತೋರಿಸಿದೆ,ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆಯ ಸಂದೇಶವನ್ನು ಸಾರಿ ಹೇಳಿ ಮಾನವೀಯತೆಯ ದೃಷ್ಟಿಯಲ್ಲಿ ರಕ್ತದ ಅವಶ್ಯಕತೆ ಉಂಟಾದ ಸಂದರ್ಭದಲ್ಲಿ ಆ ವ್ಯಕ್ತಿ ಯಾವ ಪಂಗಡದವನೆಂದು ಲೆಕ್ಕಿಸದೆ ಸಕಾಲಿಕವಾದ ಸಮಯದಲ್ಲಿ ರಕ್ತವನ್ನು ಒದಗಿಸಿ ಕೊಡುವ ಕಾರ್ಯವನ್ನು SSF ದ.ಕ. ಜಿಲ್ಲಾ ಬ್ಲಡ್ ಸೈಬೋ ಕಳೆದೆರಡು ವರ್ಷಗಳಿಂದ ಮಾಡುತ್ತಾ ಬಂದಿದೆ.
ಈ ಕಾರ್ಯಕ್ರಮ ಪೂರ್ಣ ಪ್ರಮಾಣದ ಯಶಸ್ವಿಯನ್ನು ಕಾಣಲು ಕಾರಣವಾಗಿರುವ ಬ್ಲಡ್ ಸೈಬೋ ಸಾವಿರಾರು ರಕ್ತದಾನಿಗಳ ಪಡೆಯೊಂದನ್ನೇ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.ಇದುವರೆಗೂ 99 ರಕ್ತದಾನ ಶಿಬಿರವನ್ನು ಪೂರೈಸಿದ ಬ್ಲಡ್ ಸೈಬೋ ಆಗಸ್ಟ್ 18 ಆದಿತ್ಯವಾರ ಮಂಗಳೂರಿನ ಹೃದಯ ಭಾಗದಲ್ಲಿರುವ ಪುರಭವನದಲ್ಲಿ ನಡೆಯುವ 100 ನೇ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಗಣ್ಯಾತೀತ ವ್ಯಕ್ತಿಗಳು ಪಾಲ್ಗೊಳ್ಳುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸರ್ವಧರ್ಮೀಯರನ್ನು ಹೃದಯಾಂತರಾಳದಿಂದ ಸ್ವಾಗತಿಸುತ್ತಿದೆ,SSF ಬೆಳ್ತಂಗಡಿ ಡಿವಿಷನ್
✒ ಝುಭೈರ್ ಶಾಂತಿನಗರ