ವೇಣೂರು: SSF ದ.ಕ.ಜಿಲ್ಲಾ ಬ್ಲಡ್ ಸೈಬೋ ಆದೇಶದ ಮೇರೆಗೆ ದ.ಕ.ಜಿಲ್ಲೆಯಾದ್ಯಂತ 100 ಮುಖ್ಯ ಕೇಂದ್ರಗಳಲ್ಲಿ ಕರಪತ್ರ ವಿತರಣೆ ಅಂಗವಾಗಿ ವೇಣೂರು ಸೆಕ್ಟರ್ ವ್ಯಾಪ್ತಿಯ ವೇಣೂರು ನಗರದ ಶಾಲಾ-ಕಾಲೇಜು, ಆಸ್ಪತ್ರೆ,ಗ್ರಾಮ ಪಂಚಾಯತ್, ಪೋಲಿಸ್ ಠಾಣೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರವನ್ನು ವಿತರಿಸಿ ಆಗಸ್ಟ್ 18 ಆದಿತ್ಯವಾರದಂದು ಮಂಗಳೂರಿನ ಪುರಭವನದಲ್ಲಿ ನಡೆಯುವ “100 ನೇ ಬೃಹತ್ ರಕ್ತದಾನ ಶಿಬಿರ”ವನ್ನು ಪ್ರಚಾರಪಡಿಸಲಾಯ್ತು.
ಈ ಪ್ರಚಾರ ಕಾರ್ಯದಲ್ಲಿ SSF ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ಮತ್ತು ಬ್ಲಡ್ ಸೈಬೋ ಇದರ ಉಸ್ತುವಾರಿಯಾಗಿರುವ ತೌಫೀಕ್ ವೇಣೂರು, SSF ವೇಣೂರು ಸೆಕ್ಟರ್ ಪ್ರ.ಕಾರ್ಯದರ್ಶಿ ಝುಭೈರ್ ಶಾಂತಿನಗರ, ಅದಲ್ಲದೆ ಸೆಕ್ಟರ್ ನಾಯಕರುಗಳಾದ ಸಲೀಂ ಕುಂಡದಬೆಟ್ಟು,ನೌಶಾದ್ ಕೈರೋಳಿ, ಹರ್ಷಾದ್ ಮತ್ತು ಖಲೀಲ್ ಗೋಳಿಯಂಗಡಿ ಇವರುಗಳು ಉಪಸ್ಥಿತರಿದ್ದರು.
ವರದಿ: ಝುಭೈರ್ ಶಾಂತಿನಗರ.