janadhvani

Kannada Online News Paper

ಕೆಸಿಎಫ್ ರಿಯಾದ್ ಝೋನ್ ಸ್ವಾತಂತ್ರ್ಯ ದಿನಾಚರಣೆ

ಕೆಸಿಎಫ್ ರಿಯಾದ್ ಝೋನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.

ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಫಾರೂಕ್ ಸಅದಿ ಹೆಚ್ ಕಲ್ಲು ಧ್ವಜಾರೋಹಣ ನೆರವೇರಿಸಿ ಭವ್ಯ ಭಾರತದ ಪರಂಪರೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಕೆಸಿಎಫ್ ಸೌದಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಶೀರ್ ತಲಪಾಡಿ ಮಾತನಾಡಿ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಸರ್ವ ಜನಾಂಗದ ಶಾಂತಿಯ ಬೀಡಾಗಿ ನೆಲೆ ನಿಲ್ಲಲು ಭಾರತೀಯರು ಒಗ್ಗಟ್ಟಾಗಿ ಇರಬೇಕೆಂದು ಕರೆಯಿತ್ತರು.

ರಿಯಾದ್ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಇಲ್ಯಾಸ್ ಲತೀಫಿ,ದಾವೂದ್ ಸಅದಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು ಕಾರ್ಯಕ್ರಮದಲ್ಲಿ ಹನೀಫ್ ಕಣ್ಣೂರು, ಸೌದಿ ರಾಷ್ಟ್ರೀಯ ಶಿಕ್ಷಣ ವಿಬಾಗದ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ರಿಯಾದ್ ಝೋನ್ ಸಂಘಟನಾ ಇಲಾಖೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ಸ್ವಾಗತಿಸಿ ಇಮ್ರಾನ್ ಬಶೀರ್ ವಂದಿಸಿದರು

error: Content is protected !! Not allowed copy content from janadhvani.com