ಉಳ್ಳಾಲ:: ಕಿನ್ಯ SYS,SSF ಹಾಗೂ SSF ಕಿನ್ಯ ಸೆಕ್ಟರ್ ಜಂಟಿಯಾಗಿ 73ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಬೆಳಿಗ್ಗೆ 7:15 ಕ್ಕೆ ಬೆಳರಿಂಗೆ ಸುನ್ನೀ ಸೆಂಟರ್ ಸಭಾಂಗಣದಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ SYS ಬೆಳರಿಂಗೆ ಬ್ರಾಂಚ್ ಅಧ್ಯಕ್ಷರಾದ ಮೆಹಬೂಬ್ ಸಖಾಫಿ ಕಿನ್ಯ ದುಆ ನಡೆಸಿದರು. ಇಲ್ಯಾಸ್ ಮದನಿ ಫ್ರೀಡಂ ವಿಷಯದ ಸಂದೇಶ ನಡೆಸಿದರು. ಫಾರೂಕ್ ಕಿನ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
V.A ಮುಹಮ್ಮದ್ ಮುಸ್ಲಿಯಾರ್, ಶರೀಫ್ ಸಹದಿ, ಮೂಸಕುಂಞ, ಅಝೀಝ್ ಸಾಗ್, ಅಶ್ರಫ್, ಬಶೀರ್ ಕೂಡಾರ, ಫಯಾಝ್ ಉಕ್ಕುಡ, ಝಹೀರ್ ಬೆಳರಿಂಗೆ, ನೌಫಲ್ ಕಿನ್ಯ, ಇಸಾಕ್ ಸಾಗ್ ಅಲ್ಲದೆ SYS SSF ನ ಹಲವು ಕಾರ್ಯಕರ್ತರು ಭಾಗವಹಿಸಿದ್ದರು ಫಯಾಝ್ ಕಿನ್ಯ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ನಡೆಸಿದರು.
ವರದಿ::ಫಯಾಝ್ ಕಿನ್ಯ