ಬೆಳಗಾವಿ: ಎಸ್ಸೆಸ್ಸೆಫ್ ರಾಜ್ಯ ನಾಯಕರು ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಸುಮಾರು 2500 ನಿರಾಶ್ರಿತರೊಂದಿಗೆ ಸರಕಾರಿ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು.
ಕಾಲೇಜಿನ ಪ್ರಾಂಶುಪಾಲ ಅರ್ಜುನ ಹಾದಿಮನಿ ಧ್ವಜಾರೋಹಣ ನೆರವೇರಿಸಿದರು.
ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಮಾತನಾಡಿ ಈ ಬಾರಿಯ ಜಲಪ್ರಳಯದಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಆದ್ದರಿಂದಲೇ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ನಿರಾಶ್ರಿತರೊಂದಿಗೆ ಆಚರಿಸುವುದು ಅರ್ಥಪೂರ್ಣ ಎಂದು ಮನಗಂಡು ರಾಜ್ಯ ನಾಯಕರ ತಂಡ ಇಲ್ಲಿಗೆ ತಲುಪಿದೆ ಎಂದರು. ಎಸ್ಸೆಸ್ಸೆಫ್ ವತಿಯಿಂದ 2500 ನಿರಾಶ್ರಿತರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿಗಳನ್ನು ಹಂಚಲಾಯಿತು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಮ್ಜದಿ ಉಡುಪಿ, ನವಾಝ್ ಭಟ್ಕಳ್, ಸಿನಾನ್ ಸಖಾಫಿ, ಮೌಲಾನಾ ಸಾಜಿದ್ ಗೋಕಾಕ್, ಪತ್ರಕರ್ತ ಸಾದಿಕ್ ಗೋಕಾಕ್ ಸಹಿತ ಸಾಮಾಜಿಕ ಶೈಕ್ಷಣಿಕ ರಂಗದ ಮುಂದಾಳುಗಳು ಭಾಗವಹಿಸಿದರು.