janadhvani

Kannada Online News Paper

ಭಾರತೀಯರ ಬಾಂಧವ್ಯದ ಬೆಸುಗೆ ಕಳಚದಿರಲಿ

ಆಂಗ್ಲರ ವಿರುದ್ಧ ಭಾರತೀಯರ ದೀರ್ಘಕಾಲದ ಹೋರಾಟದ ಪರಿಣಾಮ 1947 ಆಗಸ್ಟ್ ತಿಂಗಳ 15 ರಂದು ಈ ದೇಶವು ಮರಳಿ ನಮ್ಮ ಹಸ್ತಕ್ಕೆ ಸಿಕ್ಕಿತು.
ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆದು ಇಲ್ಲೇ ಠಿಕಾಣಿ ಹೊಡೆಯಲು ಸರ್ವರೀತಿಯ ಪ್ರಯತ್ನವನ್ನು ಮಾಡುತ್ತಾ ಮುನ್ನಡೆಯುತ್ತಿದ್ದ ಬಿಳಿಯರು, ಇಲ್ಲಿನವರು ಜಾತಿ-ಮತ-ಪಂಥಗಳ ಭೇದವಿಲ್ಲದೆ ಹೋರಾಡಿದಾಗ ನಮಗಿನ್ನು ಇಲ್ಲಿ ಉಳಿಗಾಲವಿಲ್ಲವೆಂದು ಮನದಟ್ಟು ಮಾಡಿ ಭಾರತವನ್ನು ಬಿಟ್ಟು ತೊಳಗಲೇಬೇಕಾಯಿತು.
ಈ ಕಂಡ ಅಪ್ರತಿಮ ನಾಯಕ ಪಂಡಿತ ಜವಾಹರಲಾಲ್ ನೆಹರುರವರು ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಆರೋಹಣ ಮಾಡುತ್ತಲೇ ಭಾರತೀಯರ ಸಂಭ್ರಮವು ಮುಗಿಲು ಮುಟ್ಟಿತು. ಜೈ ಭಾರತ್
ನಮ್ಮ ದೇಶವು ಸ್ವತಂತ್ರಗೊಂಡು ಏಳು ದಶಕಗಳು ಮುಗಿಸಿವೆ. ಆದರೆ ಹೋರಾಟದ ಮುಂಚೂಣಿ ನಾಯಕರಲ್ಲೋರ್ವರಾದ ಮಹಾನರಾದ ಮಹಾತ್ಮ ಗಾಂಧೀಜಿಯವರು ಕಂಡ ಕನಸು ಮಾತ್ರ ನನಸಾಗಿಯೇ ಉಳಿದಿರುವುದು ದುರಂತವೆಂದೇ ನಿರ್ವಾಹವಿಲ್ಲ.!
ಭಾರತೀಯರ ಬಾಂಧವ್ಯದ ಕೊಂಡಿ ದೈನಂದಿನ ಕಳಚುತ್ತಿರುವುದು ಖೇದಕರವಾಗಿದೆ. ನಾವೆಲ್ಲರೂ ಭಾರತೀಯರೆಂಬ ಮನಸ್ಸಿನಿಂದ ಮುನ್ನಡೆಯೋಣ.
ಈ ಸ್ವಾತಂತ್ರ್ಯವು ಅದಕ್ಕೆ ಕಾರಣವಾಗಲಿ.!
ಸಮಸ್ತ ನಾಗರಿಕರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಬಿ ಯಂ ಮುಮ್ತಾಝ್ ಅಲಿ ಕೃಷ್ಣಾಪುರ

error: Content is protected !! Not allowed copy content from janadhvani.com