janadhvani

Kannada Online News Paper

ಸಮರ ಸೇನಾನಿಗಳಂತೆ ಹಜ್ಜಾಜಿಗಳ ಸೇವೆಗಿಳಿದ ಕೆಸಿಎಫ್-ಎಚ್‌ವಿಸಿ ಕಾರ್ಯಕರ್ತರು

ಮಕ್ಕಾ: ಜಗತ್ತಿನ ವಿವಿಧ ದಿಕ್ಕಿನಿಂದ ವ್ಯತ್ಯಸ್ತ ಜನ,ವಿಭಿನ್ನ ಭಾಷೆ,ವಿವಿಧ ದೇಶಗಳಿಂದ ಪ್ರವಾಹದಂತೆ ಹರಿದು ಬಂದು ಮಿನಾ, ಮುಝ್ದಲಿಫಾದ ಸುಡು ಬಿಸಿಲಿನ ಮಹಾ ಸಂಗಮದಲ್ಲಿ ಒಗ್ಗೂಡುವ ಶ್ವೇತದಾರಿಗಳಾದ ಹಜ್ಜಾಜಿಗಳ ಸೇವೆಗೈಯ್ಯಲು ದುಡಿಮೆ ನಿರತ ಅನಿವಾಸಿ ಕನ್ನಡಿಗರ ಕೆಸಿಎಫ್ (ಕರ್ನಾಟಕ ಕಲ್ಚರಲ್ ಫೌಂಡೇಶನ್) ಇದರ ಕಾರ್ಯಕರ್ತರು ತಮ್ಮೆಲ್ಲಾ ಕೆಲಸ, ಕಾರ್ಯಗಳನ್ನು ಬದಿಗೊತ್ತಿ
ಸಮರ ಸೇನಾನಿಗಳಂತೆ ಸಜ್ಜಾಗಿ ಹೊರಟು ಇಂದು ಆದಿತ್ಯವಾರ ಲಕ್ಷೋಪಲಕ್ಷ ಪ್ರವಾದಿಗಳು, ಸ್ವಹಾಬಿಗಳು, ಅಲ್ಲಾಹನ ಔಲಿಯಾಗಳು ಮತ್ತು ಮುಸ್ಲಿಂ ವಿಶ್ವಾಸಿಗಳ ಪಾದ ಸ್ಪರ್ಶದಿಂದ ಧನ್ಯಗೊಂಡ ಪುಣ್ಯ ಭೂಮಿಗೆ ತಲುಪಲಿದ್ದಾರೆ.

ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ನಿರ್ದೇಶನದಂತೆ ಈ ಬಾರಿಯೂ ಅನುಭವಿ ಸ್ವಯಂ ಸೇವಕರ ತಂಡವನ್ನು ರಚಿಸಿ ಹಜ್ಜಾಜಿಗಳ ಸೇವೆಗಿಳಿಸಿದೆ.ಮಕ್ಕಾ,ಮದೀನಾ ಪರಿಸರದಲ್ಲಿ ನೆಲೆಸಿರುವ ಕೆಸಿಎಫ್ ಕಾರ್ಯಕರ್ತರು ಕಳೆದ ಒಂದು ತಿಂಗಳಿನಿಂದ ಸ್ವಯಂ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಅವರ ಸೇವೆಗೆ ಸಾಥ್ ಕೊಡಲು ಸೌದಿಅರೇಬಿಯಾದ ವಿವಿಧ ದಿಕ್ಕಿನಲ್ಲಿ ನೆಲೆಸಿರುವ ಕೆಸಿಎಫ್ ಕಾರ್ಯಕರ್ತರು ನಿನ್ನೆ ಶನಿವಾರ ಹೊರಟು ಇಂದು ಮಿನ ತಲುಪಿ ಮಿನಾದಾದ್ಯಂತ ಹಳದಿ ಜಾಕೆಟ್,ಟೋಪಿ ಧರಿಸಿ
ಮಿಂಚುಹುಳದಂತೆ ಮಿನ ಮಿನ ಪ್ರಜ್ವಲಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಹಜ್ಜಾಜಿಗಳ ಧಾರ್ಮಿಕ ವಿಧಿ ವಿಧಾನಗಳು ಮುಗಿದ ಬಳಿಕ ದುಡಿಮೆಯ ಕಡೆ ಹಿಂತಿರುಗಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಹಜ್ಜಾಜಿಗಳ ಸೇವೆಯಲ್ಲಿ ತೊಡಗಿ ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯಿಂದ ಪ್ರಶಂಸೆ ಪತ್ರವನ್ನು ತನ್ನದಾಗಿಸಿದ ಕೀರ್ತಿ ಕೆಸಿಎಫ್‌‌ಗಿದೆ.

ಅಲ್ಲಾಹನ ಸಂಪ್ರೀತಿ ಮತ್ತು ಹಜ್ಜಾಜಿಗಳ ಮನ ತೃಪ್ತಿಗೈಯ್ಯಲು ಹೊರಟಿರುವ ಸುಮಾರು ಐನೂರಕ್ಕೂ ಮಿಕ್ಕ ಕೆಸಿಎಫ್ ಕಾರ್ಯಕರ್ತರು ದಿನದ ಇಪ್ಪತ್ತನಾಲ್ಕು ಘಂಟೆ ಸರ್ವಸ್ವವನ್ನೂ ಅಲ್ಲಾಹನಿಗಾಗಿ ವಿನಿಯೋಗಿಸಿ ಸೇವೆಮಾಡುವಾಗ ಕೆಸಿಎಫ್ ಕಾರ್ಯಕರ್ತರ ಆಫಿಯತ್ ಮತ್ತು ಆರೋಗ್ಯಕ್ಕಾಗಿ ನಾವು ದುಃಅ ಮಾಡಬೇಕಾಗಿದೆ.

✍ಇಸ್ಹಾಖ್ ಸಿ.ಐ.ಫಜೀರ್
ಕೆಸಿಎಫ್ ಅಲ್ ಹಸ್ಸ ಸೆಕ್ಟರ್
ದಮ್ಮಾಂ ಝೋನ್