janadhvani

Kannada Online News Paper

ಅರಫಾ ಸಂಗಮದಲ್ಲಿ ಭಾರೀ ಮಳೆ, 22 ಲಕ್ಷಕ್ಕೂ ಮಿಕ್ಕ ಹಜ್ಜಾಜ್ ಗಳು ಭಾಗಿ

ಮಕ್ಕತುಲ್ ಮುಕರ್ರಮ: ಹಜ್‌ನ ಪ್ರಮುಖ ಆರಾಧನಾ ಕರ್ಮವಾದ ಅರಫಾ ಸಂಗಮವು ಇಂದು(ದುಲ್ ಹಜ್ 9)ಶನಿವಾರ ಮಧ್ಯಾಹ್ನ ನಡೆಯಿತು.

ಅರಫಾ ಮೈದಾನದಲ್ಲಿ ವಿಶ್ವದ 18 ಲಕ್ಷ ಹಜ್ ಯಾತ್ರಿಗಳು ಮತ್ತು ಸೌದಿ ಅರೇಬಿಯಾದ ನಾಲ್ಕು ಲಕ್ಷ ಯಾತ್ರಿಗಳು ಸೇರಿದಂತೆ 22 ಲಕ್ಷಕ್ಕೂ ಹೆಚ್ಚು ಮಂದಿ ಹಜ್ಜಾಜ್ ಗಳು ಸಂಗಮಿಸಿದ್ದರು.

ಅರಫಾ ಸಂಗಮದ ವೇಳೆ ಭಾರೀ ಮಳೆಯಿಂದಾಗಿ ಬಿಸಿಲ ಝಗೆಯಿಂದ ಪಾರಾಗಲು ಸಾಧ್ಯವಾಯಿತಾದರೂ, ಭಾರತೀಯ ಹಜ್ ಯಾತ್ರಿಕರಿಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಡೇರೆಯು ಧ್ವಂಸಗೊಂಡಿದೆ. ಅರಫಾ ಸಂಗಮದ ಬಳಿಕ ಹಜ್ಜಾಜ್ ಗಳು ಮುಝ್ದಲಿಫಾದತ್ತ ಪ್ರಯಾಣ ಬೆಳೆಸಿದ್ದಾರೆ.