janadhvani

Kannada Online News Paper

ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲೆ: ಅರ್ಧ ವಾರ್ಷಿಕ ಕೌನ್ಸಿಲ್‌

ಚಿಕ್ಕಮಗಳೂರು: ಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ಅರ್ಧ ವಾರ್ಷಿಕ ಕೌನ್ಸಿಲ್‌ ಹಾಗೂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮವು ಉಪ್ಪಳ್ಳಿ ಯೂನಿಟ್‌ನಲ್ಲಿ ‌ನಡೆಯಿತು.

ಜಿಲ್ಲಾ ಅಧ್ಯಕ್ಷರಾದ ಸಫ್ವಾನ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಸ್.ವೈ.ಎಸ್ ಅಧ್ಯಕ್ಷರಾದ ಎ.ಪಿ.ಎಸ್ ಹುಸೈನ್ ಅಲ್ ಅಹ್ದಲ್ ತಂಙಳ್ ದುಆಃ ನೆರವೇರಿಸಿದರು. ಶರಫುದ್ದೀನ್ ಸ‌ಅದಿ ಉಪ್ಪಳ್ಳಿ ಉದ್ಘಾಟಿಸಿದರು.

ರಾಜ್ಯ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ್ದ ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ ಸಭೆಯನ್ನು ನಿಯಂತ್ರಿಸಿದರು. ರಾಜ್ಯ ಕಾರ್ಯದರ್ಶಿ ಹುಸೈನ್ ಸ‌ಅದಿ ಹೊಸ್ಮಾರು ಹಾಗೂ ರಾಜ್ಯ ಸದಸ್ಯರಾದ ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು ಉಪಸ್ಥಿತರಿದ್ದರು.

ಕೌನ್ಸಿಲ್‌ನಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಫುದ್ದೀನ್ ಕೊಪ್ಪ ಜಿಲ್ಲೆಯ ಆರು ತಿಂಗಳಲ್ಲಿ ನಡೆಸಿದ ಕಾರ್ಯಕ್ರಮದ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಿದರು. ಹಾಗೂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ಮಾಡಲಾಯಿತು.

ಜಿಲ್ಲಾ ಕಾರ್ಯದರ್ಶಿ ಶಾಹೀನ್ ಅಲಿ ಸ್ವಾಗತಿಸಿದರು ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಝೈನುಲ್ ಆಬಿದ್ ಸಖಾಫಿ ವಂದಿಸಿದರು.