janadhvani

Kannada Online News Paper

SჄS ಕೆ.ಸಿ.ರೋಡ್ ಸೆಂಟರ್ ವತಿಯಿಂದ ಚುನಾವಣಾ ಕಾರ್ಯಾಗಾರ

ಉಳ್ಳಾಲ : SჄS ಎಸ್ ವೈ ಎಸ್ ಕೆ.ಸಿ.ರೋಡ್ ಸೆಂಟರ್ ವತಿಯಿಂದ ಚುನಾವಣಾ ಕಾರ್ಯಾಗಾರ ದಿನಾಂಕ 30-07-2019 ಮಂಗಳವಾರ ಸಂಜೆ 7-30 ಕ್ಕೆ ಎಸ್ ವೈ ಎಸ್ ಕೆ.ಸಿ ರೋಡ್ ಸೆಂಟರ್ ಸಭಾಂಗಣದಲ್ಲಿ ಉಪಾಧ್ಯಕ್ಷರಾದ ಜನಾಬ್ ನಝೀರ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ಜರಗಿತು.

ಬಹು ಅಬ್ಬುರ್ರಶೀದ್ ಝೈನಿ ಕಾಮಿಲ್ ಸಖಾಫಿ ಚುನಾವಣೆ ಕುರಿತಾದ ವಿಚಾರವಾಗಿ ಮಾತನಾಡಿದರು. ಎಸ್ ವೈ ಎಸ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಸಾಂದರ್ಭಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಗಲಿದ ಸುನ್ನೀ ನೇತಾರರನ್ನೂ ಕುಟುಂಬದ ಸದಸ್ಯರನ್ನೂ ಸ್ಮರಿಸಲಾಯಿತು ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್ ಕಾರ್ಯದರ್ಶಿ ಕೆ.ಎಮ್ ಫಾರೂಕ್ ಬಟ್ಟಪ್ಪಾಡಿ ಕೋಟೆಪುರ ಧನ್ಯವಾದಗೈದರು. ಹನ್ನೆರಡು ಬ್ರಾಂಚ್ ನ ಅಧ್ಯಕ್ಷರು ಕಾರ್ಯದರ್ಶಿ ಗಳ ಸಹಿತ ನೂರಾರು ಮಂದಿ ಕಾರ್ಯಗಾರದಲ್ಲಿ ಭಾಗವಹಿಸಿದರು