ಅಬಧಾಬಿ: ಕರುನಾಡಿನ ಮರ್ಕಝ್ ಎಂದೇ ಖ್ಯಾತಿ ಪಡೆದ ಬಹುದೊಡ್ಡ ವಿದ್ಯಾ ಸಮುಚ್ಚಯ ಅಲ್ ಮದೀನಾ ಮಂಜನಾಡಿ ಇದರ ಸಾರಥಿಯೂ, ಕೇಂದ್ರ ಮುಶಾವರ ಸದಸ್ಯರೂ, ಅನಾಥ ಮಕ್ಕಳ ರಕ್ಷಕರಾಗಿಯೂ, ಸುನ್ನೀ ಧೀರ ನಾಯಕರಾದಂತಹ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರು ಕೆಲವು ದಿನಗಳ ಅನಾರೋಗ್ಯದ ಕಾರಣದಿಂದಾಗಿ ಅಲ್ಲಾಹನ ಅನುಲ್ಲಂಘನೀಯ ಕರೆಗೆ ಓಗೊಟ್ಟು ಇಂದು ಇಹಲೋಕ ತ್ಯಜಿಸಿದರು.
ಸರಳ ಸಜ್ಜನಿಕೆಯಿಂದ ಜೀವನವನ್ನು ಸಾಗಿಸಿ, ತನ್ನ ಸಂಪೂರ್ಣ ಜೀವನವನ್ನು ಸಮುದಾಯದ ಉನ್ನತಿಗಾಗಿ ಮುಡಿಪಾಗಿಟ್ಟು ಇದೀಗ ಮರಣವೆಂಬ ವಾಸ್ತವಕ್ಕೆ ತಲೆಬಾಗಿದರು.
ಅವರ ವಿಯೋಗವು ಸುನ್ನೀ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.
ಉಸ್ತಾದರ ವಿಯೋಗಕ್ಕೆ ಕೆಸಿಎಫ್ ಯುಎಇ ನ್ಯಾಷನಲ್ ಸಮಿತಿಯ ಸಂತಾಪ ಸೂಚಿಸುತ್ತಾ ಸುನ್ನೀ ಸಂಘ ಕುಟುಂಬದ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಉಸ್ತಾದರ ಹೆಸರಿನಲ್ಲಿ ಸಾಧ್ಯವಾದಷ್ಟು ಖತಮುಲ್ ಖುರ್’ಆನ್, ತಹ್ಲೀಲ್ ಓದಿ ಹದಿಯ ಮಾಡಬೇಕೆಂದು ವಿನಂತಿಸುತ್ತಾ, ಅವರ ಕುಟುಂಬಸ್ಥರಿಗೆ ಅಲ್ಲಾಹನು ಸಹಿಸುವ ತಾಳ್ಮೆ ನೀಡಿ ಅನುಗ್ರಹಿಸಲಿ ಆಮೀನ್.
ಸೌದಿ ಅರೇಬಿಯಾ ಕೆಸಿಎಫ್ ಸಂತಾಪ:
ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ,ಅನಾಥ ಸಂರಕ್ಷಣೆಯಲ್ಲಿ ಅತೀವ ಕಾಳಜಿ ವಹಿಸುತ್ತಿದ್ದ ಕರ್ನಾಟಕದ ಘನ ವಿದ್ವಾಂಸ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ಯವರ ವಿಯೋಗವು ಸಮಾಜವನ್ನು ತೀರಾ ದುಃಖಿತರನ್ನಾಗಿಸಿದೆ. ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ರಾಷ್ಟ್ರೀಯ ಸಮಿತಿಯು ತನ್ನ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದೆ.
ಕುವೈತ್ ಕೆಸಿಎಫ್ ಸಂತಾಪ:
ಮಂಜನಾಡಿ ಅಲ್ ಮದೀನಾ ವಿದ್ಯಾಸಂಸ್ಥೆಯ ರುವಾರಿಯೂ, ಸುನ್ನೀ ಜನ ಸಮೂಹದ ಮನಗೆದ್ದ ನಾಯಕರೂ ಆಗಿದ್ದ ಶರಫುಲ್ ಉಲಮಾರ ಮರಣ ವಾರ್ತೆಯು ಅನಿವಾಸೀ ಮಿತ್ರರನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ.
ಸರಳ ಸಜ್ಜನಿಕೆಯಿಂದ ಜೀವನವನ್ನು ಸಾಗಿಸಿ, ತನ್ನ ಸಂಪೂರ್ಣ ಜೀವನವನ್ನು ಸಮುದಾಯದ ಉನ್ನತಿಗಾಗಿ ಮುಡಿಪಾಗಿಟ್ಟು ಇದೀಗ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ತಲೆಬಾಗಿ ನಮ್ಮಿಂದ ಅಗಲಿದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ವಿಯೋಗವು ಸುನ್ನೀ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ ತನ್ನ ಸಂತಾಪದಲ್ಲಿ ಸೂಚಿಸಿದೆ.






