ಮಕ್ಕಾ: ಮಿನಾದಲ್ಲಿನ ರಸ್ತೆಗಳ ತಾಪಮಾನವನ್ನು ಕುಗ್ಗಿಸುವ ಪ್ರಕ್ರಿಯ ಪ್ರಥಮ ಹಂತವನ್ನು ಮಕ್ಕಾ ನಗರಸಭೆಯು ಪೂರ್ಣಗೊಳಿಸಿದೆ. ಪ್ರಾಯೋಗಿಕವಾಗಿ ಜಂರಾದ ನಡೆದಾರಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಠಿಣವಾದ ಬಿಸಿಲಿನಿಂದ ಹಜ್ಜಾಜ್‌ಗಳಿಗೆ ಈ ಯೋಜನೆ ವರದಾನವಾಗಲಿದೆ.
ಹಿಂದಿನ ವರ್ಷಗಳಿಗಿಂತ ಹೆಚ್ಚಿನ ತಾಪಮಾನ ಈ ವರ್ಷ ದಾಖಲಾಗಿದ್ದು, ಯಾತ್ರಾರ್ಥಿಗಳಿಗೆ ಬಿಸಿಲಿನಿಂದ ರಕ್ಷಣೆ ನೀಡುವ ಸಲುವಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದರ ಭಾಗವಾಗಿ ಹಜ್ಜಾಜ್‌ಗಳು ಹೆಚ್ಚಿನ ಸಮಯ ಉಳಿದುಕೊಳ್ಳುವ ಮಿನಾದಲ್ಲಿ ಹೊಸ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ.
ಮಿನಾದ ಶುಹೈಬೈನ್ ಏರಿಯಾದ ಜಂರಾಗೆ ತೆರಳುವ 3500 ಚದರ ಮೀಟರ್ ವಿಸ್ತಾರವಿರುವ ನಡೆದಾರಿಯಲ್ಲಿ ಈ ಯೋಜನೆಯನ್ನು ಜಪಾನಿನ ಸುಮಿತೋಮೋ ಕಂಪನಿಯ ಸಹಕಾರದೊಂದಿಗೆ ಪರೀಕ್ಷಿಸಲಾಗುತ್ತಿದೆ. ಅಸಫಾಲ್ಟ್ ಎನ್ನುವ ರಾಸಾಯನಿಕ ಪದಾರ್ಥವನ್ನು ಬಳಿಯುವುದಾಗಿದೆ ಪ್ರಯೋಗ. 15 ರಿಂದ 20 ಶೇ. ವರೆಗೆ ತಾಪಮಾನವನ್ನು ನಿಯಂತ್ರಿಸಲು ಈ ಮೂಲಕ ಸಾಧ್ಯವಾಗಲಿದೆ. ಮಾತ್ರವಲ್ಲದೆ ರಸ್ತೆಗಳಲ್ಲಿ ನಿರ್ಮಿಸಿರುವ ಸೆಂಟರ್‌ಗಳಲ್ಲಿ ತಾಪಮಾನ ದಾಖಲಾಗುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಇತರ ಕಡೆಗಳಿಗೂ ವಿಸ್ತರಿಸುವ ಯೋಚನೆ ಇದೆ.