janadhvani

Kannada Online News Paper

ಇನ್ನು ದುಬೈ-ಶಾರ್ಜಾ ನಡುವಿನ ಯಾತ್ರಾ ಸಮಯ ಕೇವಲ 8 ನಿಮಿಷ ಮಾತ್ರ

ದುಬೈ: ದುಬೈ ಶಾರ್ಜಾ ನಡುವಿನ ಯಾತ್ರಾ ಸಮಯಯನ್ನು ಅತ್ಯಂತ ಕಡಿಮೆಗೊಳಿಸುವ ಹೊಸ ರಸ್ತೆಯನ್ನು ಸಂಚಾರಕ್ಕಾಗಿ ತೆರೆಯಲಾಗಿದೆ. ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆ ಮತ್ತು ಎಮಿರೇಟ್ಸ್ ರಸ್ತೆಗಳನ್ನು ಬಂಧಿಸುವ ರೀತಿಯಲ್ಲಿ ನಿರ್ಮಿಸಲಾದ 12 ಕಿ.ಮೀ ಉದ್ದದ ರಸ್ತೆ ಬುಧವಾರ ಉದ್ಘಾಟನೆಗೊಂಡಿದೆ.

ದುಬೈ-ಶಾರ್ಜಾ ಮಾತ್ರವಲ್ಲದೆ ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆಯಿಂದ ಶೈಖ್ ಝಾಯಿದ್ ಬಿನ್ ಹಂದಾನ್ ಅಲ್ ನಹ್ಯಾನ್ ರಸ್ತೆಗಿರುವ ದೂರವನ್ನೂ ಇದು ಮಿತಗೊಳಿಸಲಿದೆ. ಪ್ರಸಕ್ತ ಎರಡೂ ರಸ್ತೆಗಳ ಯಾತ್ರಾ ಸಮಯವು ಹನ್ನೊಂದು ನಿಮಿಷಗಳಾಗಿದ್ದು, ಮುಂದೆ ಅದು ನಾಲ್ಕು ನಿಮಿಷಗಳಾಗಿ ಮಾರ್ಪಡಲಿದೆ.

ಹೊಸ ರಸ್ತೆ ಮೂಲಕ ಗಂಟೆಗೆ 6000 ವಾಹನಗಳಂತೆ ಸಂಚರಿಸಬಹುದಾಗಿದೆ. ಇದು ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆಯ ದಟ್ಟಣೆಯನ್ನು ಶೇ.10ರಷ್ಟು ಕಡಿಮೆ ಗೊಳಿಸಲಿದೆ ಎಂದು ರೋಡ್ಸ್ ಆ್ಯಂಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿಯ ಚೇರ್ಮನ್ ಮಾತರ್ ಅಲ್ ಥಾಯರ್ ತಿಳಿಸಿದ್ದಾರೆ.

ದ್ವಿಪಥಗಳಲ್ಲಿ ಗಂಟೆಗೆ 12,000 ವಾಹನಗಳು ಒಂದೇ ಸಮಯ ಸಂಚರಿಸಬಹುದಾದ ಈ ರಸ್ತೆಯು ಅಲ್ ಅಂರದಿ- ಅಲ್ ಖವನೀಜ್ ರಸ್ತೆ ಮತ್ತು ಅಲ್ ಅವೀರ್- ರಾಸ್ ಅಲ್ ಖೋರ್ ರಸ್ತೆಗಳಿಗೆ ಸಮಾಂತರ ವಾಗಲಿದೆ.