ದಮ್ಮಾಮ್: ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಮೃತಪಟ್ಟ ಹಿಂದೂ ಸಹೋದರನ ಮೃತ ಶರೀರವು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸಹಕಾರದಿಂದ ತಾಯ್ನಾಡಿಗೆ.
ದಮ್ಮಾಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲಖನೌ ನಿವಾಸಿ ಲಾಲ್ ಬಹದ್ದೂರ್ ಎಂಬವರು ಕಳೆದ ಜೂನ್ ನಲ್ಲಿ ನಿಧನ ಹೊಂದಿದ್ದು, ಅವರ ಮೃತ ಶರೀರವನ್ನು ಅಂತ್ಯಕ್ರಿಯೆಗಾಗಿ ಊರಿಗೆ ಕಳುಹಿಸುವ ಸಲುವಾಗಿ ಭಾರತೀಯ ರಾಯಭಾರಿ (Indian Embassy) ಕಚೇರಿಯಿಂದ ಕೆ.ಸಿ.ಎಫ್ ಗೆ ಮುಂದಾಳತ್ವ ವಹಿಸಲು ವಿಶೇಷ ದೂರವಾಣಿ ಕರೆ ಬಂದಾಗ ಅದನ್ನು ಸ್ವೀಕರಿಸಿ, ಎಲ್ಲಾ ಪೇಪರ್ ಕಾರ್ಯಗಳನ್ನು ಮುಗಿಸಿ ಜುಲೈ 20 ಕ್ಕೆ ಅವರ ಪಾರ್ಥಿವ ಶರೀರವನ್ನು ಊರಿಗೆ ಕಳುಹಿಸಿ ಕೊಡುವುದರಲ್ಲಿ ಯಶಸ್ವಿಯಾಗಿದೆ.
ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ಮತ್ತು ದಮ್ಮಾಮ್ ಝೋನ್ ಸಾಂತ್ವನ ವಿಭಾಗದ ಅಧ್ಯಕ್ಷರಾದ ಬಾಷಾ ಗಂಗಾವಳಿ ಸಹಿತ ಹಲವು ಕಾರ್ಯಕರ್ತರು ಈ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ.
ಸಾಂತ್ವನ ವಿಭಾಗ
ಕೆ.ಸಿ.ಎಫ್ ದಮ್ಮಾಮ್ ಝೋನ್







Good job masha allha