janadhvani

Kannada Online News Paper

ಮಹ್ರಮ್ ಇಲ್ಲದ ಹಜ್ಜಾಜ್‌ಗಳಿಗೆ ಮಕ್ಕಾದಲ್ಲಿ ವಿಫುಲ ಸೌಕರ್ಯ

ಮಕ್ಕಾ: ಮಹ್ರಮ್ ಇಲ್ಲದ ಹಜ್ಜಾಜ್‌ಗಳಿಗೆ ಮಕ್ಕಾದಲ್ಲಿ ವಿಫುಲವಾದ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ವರ್ಷ ಅತೀ ಹೆಚ್ಚಿನ ಮಹಿಳಾ ಹಜ್ಜಾಜ್‌ಗಳು ಕೇರಳದಿಂದ ರಕ್ಷಕರಿಲ್ಲದೆ ಆಗಮಿಸಿದ್ದಾರೆ. ಮಹಿಳೆಯರಿಗಾಗಿ ವನಿತಾ ಸುರಕ್ಷಾ ಸಿಬ್ಬಂದಿ, ಅಧಿಕಾರಿಗಳು ಮತ್ತು ನೂರಾರು ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇತಿಹಾಸಲ್ಲೇ ಇದು ಎರಡನೇ ಬಾರಿಗೆ ಭಾರತದಿಂದ ಮಹ್ರಮ್ ಇಲ್ಲದೆ ಹಜ್ಜಾಜ್‌ಗಳು ಬಂದಿಳಿದಿದ್ದಾರೆ. 45 ವರ್ಷಕ್ಕಿಂದ ಮೇಲ್ಪಟ್ಟ 2232 ಮಂದಿ ಈ ಸಲ ಈ ವಿಭಾಗದಲ್ಲಿ ಬಂದಿದ್ದಾರೆ. ಪುರುಷರ ಸಹಾಯವಿಲ್ಲದೆ ಬಂದ ಇವರ ಪೈಕಿ 2011 ಮಂದಿ ಕೇರಳದವರಾಗಿದ್ದಾರೆ. ಆರು ಮಂದಿ ಸ್ವಯಂ ಸೇವಕರು ಇವರೊಂದಿಗೆ ಊರಿಂದ ಬಂದಿದ್ದು, ನೂರಾರು ಮಹಿಳಾ ಸೇವಕರು ಮಕ್ಕಾದಲ್ಲಿ ಇವರ ಸಹಾಯಕ್ಕೆ ಇದ್ದಾರೆ.

ಮಹ್ರಮ್ ಇಲ್ಲದೆ ಬಂದ ಹಜ್ಜಾಜ್‌ಗಳಿಗೆ ಆರೊಗ್ಯ- ಯಾತ್ರೆ ಸಹಿತ ಪ್ರತ್ಯೇಕ ಸೌಕರ್ಯ ಒದಗಿಸಲಾಗಿದೆ. ಇವರ ವಾಸ ಸ್ಥಳಗಳಲ್ಲಿ 24 ಗಂಟೆಯೂ ನಿರಂತರವಾಗಿ ಸುರಕ್ಷಾ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.

error: Content is protected !! Not allowed copy content from janadhvani.com