janadhvani

Kannada Online News Paper

SBS ಉಪ್ಪಿನಂಗಡಿ ವಲಯ: ನೂತನ ಸಮಿತಿಯ ಸಾರಥಿಗಳು

SBS ಉಪ್ಪಿನಂಗಡಿ ವಲಯ ಅಧ್ಯಕ್ಷರಾಗಿ ಮುಹಮ್ಮದ್ ಸುಹೈಲ್ ಹೊಸಮಜಲು.ಪ್ರ ಕಾರ್ಯದರ್ಶಿಯಾಗಿ ಮುಹಮ್ಮದ್ ರಾಹಿದ್ ಕೆಮ್ಮಾರ ಆಯ್ಕೆ
ಉಪ್ಪಿನಂಗಡಿ,ಜುಲೈ.21: ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ SBS ಉಪ್ಪಿನಂಗಡಿ ವಲಯ ಮಹಾಸಭೆಯು ಮಿಷನರಿ ವಿಭಾಗ ಅಧ್ಯಕ್ಷ ಎಂ ಹೆಚ್ ಅಬೂಬಕ್ಕರ್ ಸಖಾಫಿ ಕರ್ವೇಲು ರವರ ಅಧ್ಯಕ್ಷತೆಯಲ್ಲಿ ರೇಂಜ್ ಅಧ್ಯಕ್ಷ ಮುತ್ತಲಿಬ್ ಸಖಾಫಿ ರವರ ಉಧ್ಘಾಟನೆ ಯೊಂದಿಗೆ ಡಿ ಹೆಚ್ ಇಬ್ರಾಹಿಂ ಸಅದಿ ರವರ ಪ್ರಾರ್ಥನೆ ಮೂಲಕ ನೆಕ್ಕಿಲಾಡಿ ಖುವ್ವತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ಜರಗಿತು.

SYS ಕರ್ನಾಟಕ ರಾಜ್ಯ ಅಧ್ಯಕ್ಷ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿಯವರು ವಿಷಯ ಮಂಡಿಸಿದರು. ರೇಂಜ್ ಪ್ರ.ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಉಪ್ಪಿನಂಗಡಿ ವಲಯ ಅಧ್ಯಕ್ಷ ಸಲೀಲ್ ಕೆಮ್ಮಾರ ವರದಿ ಮಂಡಿಸಿದರು.

2019-2020 ರ ಸಾಲಿನ ನೂತನ ಸಮಿತಿ:

ಅಧ್ಯಕ್ಷ ಮುಹಮ್ಮದ್ ಸುಹೈಲ್ ಹೊಸಮಜಲು, ಪ್ರ ಕಾರ್ಯದರ್ಶಿ ಮುಹಮ್ಮದ್ ರಾಹಿದ್ ಕೆಮ್ಮಾರ.ಮ, ಕೋಶಾಧಿಕಾರಿ.ಮುಹಮ್ಮದ್ ಶಫೀಖ್ ಸರಳಿಕಟ್ಟೆ, ಉಪಾಧ್ಯಕ್ಷರು ಮುಹಮ್ಮದ್ ಅಫ್ಜಲ್ ನೆಕ್ಕಿಲಾಡಿ, ಆರಿಫ್ ಉರ್ಲಡ್ಕ, ಕಾರ್ಯದರ್ಶಿಗಳಾಗಿ ಉಬೈದ್ ಕರ್ವೇಲು, ಮಿಸ್ಬಾಹುದ್ದೀನ್ ಬಾಜಾರು, ಸದಸ್ಯರುಗಳಾಗಿ ಆರಿಫ್ ಕುಕ್ಕಿನಡಿ, ಶಾಹಿಲ್ ತೆಕ್ಕಾರು, ಸಮ್ಮಾಸ್ ಮೊರಂಕಳ ರವನ್ನು ಆಯ್ಕೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಮದ್ರಸ SBS ಅಧ್ಯಕ್ಷ, ಪ್ರ. ಕಾರ್ಯದರ್ಶಿ,ಕೋಶಾಧಿಕಾರಿ ಮತ್ತು ಮುದಬ್ಬಿರುಗಳು ಉಪಸ್ಥಿತರಿದ್ದರು.

ಕೊನೆಯಲ್ಲಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.ಕಾರ್ಯದರ್ಶಿ ಮುಹಮ್ಮದ್ ಸಖಾಫಿ ಬಾಜಾರು ನೆರೆದವರನ್ನು ಸ್ವಾಗತಿಸಿ ವಂದಿಸಿದರು.