janadhvani

Kannada Online News Paper

ದುಬೈ ಸಂದರ್ಶಕರ ಗಮನಕ್ಕೆ: ನಿಷೇಧಿತ ವಸ್ತುಗಳನ್ನು ವಶಪಡಿಸಲಾಗುತ್ತದೆ

ದುಬೈ: ದುಬೈ ಪೊಲೀಸರು ಕಳೆದ ವರ್ಷ 41,000 ನಿಷೇಧಿತ ವಸ್ತುಗಳನ್ನು ಸಂದರ್ಶಕರಿಂದ ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷ ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ವಶಪಡಿಸಲಾಗಿದೆ ಎಂದು ದುಬೈ ಪೊಲೀಸ್ ವಿಮಾನ ನಿಲ್ದಾಣ ಭದ್ರತಾ ವಿಭಾಗದ ಉಪ ನಿರ್ದೇಶಕ ಬ್ರಿಗೇಡಿಯರ್ ಮುಹಮ್ಮದ್ ಅಹ್ಮದ್ ಬಿನ್ ದೈಲನ್ ಹೇಳಿದ್ದಾರೆ.

ವಶಪಡಿಸಿಕೊಂಡ ವಸ್ತುಗಳಲ್ಲಿ ನಿಷೇಧಿತ ದ್ರವ್ಯಗಳು, ಹರಿತವಾದ ಆಯುಧಗಳು, ಲೈಟರ್‌ಗಳು, ಸೂಜಿಗಳು ಮತ್ತು ಕತ್ತರಿ ಸೇರಿವೆ. ದುಬೈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಕರು ಏನು ತರಬಹುದು ಮತ್ತು ಯಾವುದನ್ನು ತರಬಾರದು ಎಂಬ ಬಗ್ಗೆ ಅರಿವಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವದಲ್ಲೇ ಅತೀ ಹೆಚ್ಚು ಯಾತ್ರಿಕರು ತಲುಪುವ ವಿಮಾನ ನಿಲ್ದಾಣವಾಗಿದ್ದು, ಇಂತಹ ಪರಿಶೋಧನೆಯಿಂದ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಪ್ರತಿ ತಿಂಗಳು, ಒಂದು ಕೋಟಿ ಪ್ರಯಾಣಿಕರು ದುಬೈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ. ರಜಾದಿನಗಳಲ್ಲಿ ಈ ಅಂಕಿ ಅಂಶಗಳು ಮತ್ತೆ ಏರಿಕೆಯಾಗುತ್ತದೆ.

ಕಾರ್ಮಿಕ ಶಿಬಿರಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದ್ದು, ವಿಮಾನ ನಿಲ್ದಾಣದ ಮೂಲಕ ಸಾಗಿಸಲು ಅನುಮತಿಸಲಾದ ವಸ್ತುಗಳ ಮಾಹಿತಿಯನ್ನು ಒಳಗೊಂಡಿರುವ ಕರಪತ್ರಗಳು. ಭಾರತ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ಬಾಂಗ್ಲಾದೇಶ ದೂತಾವಾಸಗಳು ಸಹಯೋಗದೊಂದಿಗೆ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. 2018 ರಲ್ಲಿ ಭಾರತದಿಂದ 29 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ದುಬೈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದರು.