janadhvani

Kannada Online News Paper

ಸೂಕ್ಷ್ಮ ನಡವಳಿಕೆಯ ವಿದ್ವಾಂಸ ಡಾ:ಅಬ್ದುಲ್ ಹಕೀಂ ಅಝ್ಹರಿ

✍ಕೆಎಸ್ಎಮ್.ಎಲಿಮಲೆ
(ಮೂಲ: ಮಲಯಾಳಂ)

ಭಾರತೀಯ ಮುಸ್ಲಿಮರ ನೇತೃತ್ವ ವಹಿಸಿಕೊಂಡಿರುವ ಒಬ್ಬ ಯುವ ವಿಧ್ವಾಂಸರಾಗಿದ್ದಾರೆ ಡಾ: ಅಬ್ದುಲ್ ಹಕೀಂ ಅಝ್ಹರಿ ಉಸ್ತಾದರು.

ಎಲ್ಲಾ ರಂಗಗಳಲ್ಲೂ ಉತ್ತಮ ತಿಳಿವಳಿಕೆಯನ್ನು ಹೊಂದಿರುವ ಅವರು ಶೈಕ್ಷಣಿಕ, ಸಾಮಾಜಿಕ, ಸಹಾಯ, ಸಾಂತ್ವನ ಹಾಗೂ ಧಾರ್ಮಿಕ ರಂಗದಲ್ಲೂ ತನ್ನನ್ನು ತೊಡಗಿಸಿಕೊಂಡು ಇಡೀ ಭಾರತವೇ ಗುರುತಿಸುವ ರೀತಿಯಲ್ಲಿ ಉತ್ತಮ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.

ಬರಹಗಳು, ಭಾಷಣಗಳು, ಅಧ್ಯಾಪಕ ಭೋದಕ ಹಾಗೂ ಜೀವಕಾರುಣ್ಯ ಕಾರ್ಯಗಳಲ್ಲಿ ತನ್ನ ವಿಭಿನ್ನವಾದ ನಡೆಗಳನ್ನಾಗಿವೆ ಡಾ. ಹಕೀಂ ಅಝ್ಹರಿಯವರು ನಿರ್ವಹಿಸುತ್ತಿರುವುದು.

ಇಂದು ಭಾರತೀಯ ಮಸ್ಲಿಮರ ಅಜೇಯ ನೇತಾರರಾಗಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ ಪಿ ಅಬೂಬಕರ್ ಮುಸ್ಲಿಯಾರ್ ಉಸ್ತಾದರ ಮಗನಾಗಿ 1971 ರಲ್ಲಾಗಿತ್ತು ಅವರ ಜನನ.
ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯ, ಅಲ್ ಅಝ್ಹರಿ ಯುನಿವರ್ಸಿಟಿ ಈಜಿಫ್ತ್, ಕ್ಯಾಲಿಕಟ್ ಯುನಿವರ್ಸಿಟಿ, ಮುಂತಾದ ಕಡೆಗಳಲ್ಲಿ ಬಿರುದುದಾರಿಯಾಗಿ ಹೊರಹೊಮ್ಮಿದ್ದಾರೆ.
ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಯುನಿವರ್ಸಿಟಿಯಿಂದ ಪಿ ಹೆಚ್ ಡಿ(PHD) ಪದವಿಯನ್ನು ಕೂಡ ತನ್ನದಾಗಿಸಿಕೊಂಡಿದ್ದಾರೆ.
ಹಾಗೂ ತನ್ನ ನಿರಂತರ ಪ್ರಭಾಷಣ ವೇದಿಕೆಗಳಿಂದಲೂ, ಜನಮೆಚ್ಚುವ ಸ್ವಾಂತ್ವನ ಕಾರ್ಯಗಳಿಂದಲೂ ಕಷ್ಟ ಅನುಭವಿಸುತ್ತಿರುವ ಒಂದು ಸಮೂಹವನ್ನು ಇಂಡಿಯದಲ್ಲೂ ಇಂಡಿಯಾದ ಹೊರಗೂ ವಿದೇಶ ರಾಷ್ಟ್ರ ಗಳಲ್ಲೂ ಉನ್ನತಿಗೆ ಕೊಂಡು ಹೋಗುವ ಅವರ ಯಶಸ್ಸು ನಮ್ಮ ಕಣ್ಣ ಮುಂದೆಯೇ ಕಾಣಬಹುದು.

ಅವರು ಸ್ಥಾಪಿಸಿದ ಪೂನೂರು ಮರ್ಕಝ್ ಗಾರ್ಡನ್ ಇದರ ವಿಧ್ಯಾರ್ಥಿಗಳು ಧಾರ್ಮಿಕ ರಂಗದಲ್ಲೂ ಲೌಕಿಕ ರಂಗದಲ್ಲೂ ಮುಂದೆ ಬಂದಿರುವುದು ಶ್ಲಾಘನೀಯ. ಹಲವಾರು ವೈಜ್ಞಾನಿಕ ಸಂಶೋಧನೆಗಳು ಹಾಗೂ ವಿದ್ಯಾಲಯಗಳು ಅಝ್ಹರಿಯವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದೆ.
ಭವ್ಯ ಭಾರತದ 22 ರಾಜ್ಯಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ ಹಾಗೂ ನಿರಾಶ್ರಿತರ ರಕ್ಷಣೆಯನ್ನು ಲಕ್ಷ್ಯವಾಗಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ರಿಲೀಫ್ ಮತ್ತು ಚಾರಿಟೇಬಲ್ ಫೌಂಡೇಶನ್ ಇದರ ಪ್ರಧಾನ ಕಾರ್ಯದರ್ಶಿಯಾಗಿ,
ಕೇರಳವಲ್ಲ ಇಡೀ ಇಂಡಿಯದಲ್ಲೇ ಹೊಸತೊಂದು ಸಂಸ್ಕೃತಿಯನ್ನು ರೂಪೀಕರಿಸಿದ ಜಾಮಿಯಾ ಮರ್ಕಝ್ ಇದರ ಡೈರಕ್ಟರ್, ಹಾಗೂ ಹಲವಾರು ವಿಧ್ಯಾ ಸಂಸ್ಥೆಗಳಿಗೆ ನೇತೃತ್ವ, ವೈಜ್ಞಾನಿಕ ನಗರಿ ಎಂದೇ ಪ್ರಖ್ಯಾತವಾದ ನೋಲೆಡ್ಜ್ ಸಿಟಿ ಇದರ ಡೈರಕ್ಟರ್, ಉರ್ದು ಭಾಷಾ ವಿಕಸನ ಇದರ ಮೆಂಬರಾಗಿಯೂ ಇನ್ನಿತರ ಪದವಿಗಳನ್ನೂ ಸ್ಥಾನಗಳನ್ನೂ ಸ್ವೀಕರಿಸಿಕೊಂಡು ಬರುತ್ತಿದ್ದಾರೆ.
ಪ್ರಪಂಚದ ವಿವಿಧ ಕಡೆಗಳಲ್ಲಿ ನಡೆಯುವ ಸೆಮಿನಾರ್ ಗಳಲ್ಲಿಯೂ ಸಮ್ಮೇಳನಗಳಲ್ಲಿಯೂ ಹಕೀಂ ಅಝ್ಹರಿ ಉಸ್ತಾದರ ಉಪಸ್ಥಿತಿಯನ್ನು ಕಾಣಬಹುದು.
2013 ರಲ್ಲಿ ಯಮನಿನ ದಾರುಲ್ ಮುಸ್ತಫಾದಲ್ಲಿ ನಡೆದ ಅಲ್ ಮುಲ್ತಕ, 2014 ರಲ್ಲಿ ತುರ್ಕಿಯಲ್ಲಿ ನಡೆದ ಅಂತರಾಷ್ಟ್ರೀಯ ಗ್ರಾಜ್ಯುವೇಟ್ ಸಮಾವೇಶ, ಮಲೇಷಿಯಾ ಇಸ್ಲಾಮಿಕ್ ಸಮಾವೇಶ, ಚ್ಯಾಚ್ಯುನದಲ್ಲಿ ನಡೆದ ಅಂತರಾಷ್ಟ್ರೀಯ ಇಸ್ಲಾಮಿಕ್ ಸಮ್ಮೇಳನ, ಹಾಗೂ ಲಂಡನಿನ ಕೇಂಬ್ರಿಡ್ಜ್ ನಲ್ಲಿ ನಡೆದ ಇಸ್ಲಾಮಿಕ್ ಕಾನ್ಫರೆನ್ಸ್, ಇವೆಲ್ಲವೂ ಹಕೀಂ ಅಝ್ಹರಿ ಯವರು ಭಾಗವಹಿಸಿದ ಪ್ರಮುಖ ಸಮ್ಮೇಳನಗಳಾಗಿವೆ.

ಅರಬೀ ಇಂಗ್ಲೀಷ್ ಭಾಷೆಗಳಲ್ಲಿ ಉತ್ತಮ ತಿಳಿವಳಿಕೆ ಇರುವ ಅವರು ಭಾರತದಲ್ಲೂ ಹೊರಗೂ ನಡೆಸಿದ ಪ್ರಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಂದರ ನೋಟವಾಗಿದೆ.
ಮಲಯಾಳಂನಲ್ಲಿಯೂ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. “ಕಸೀದತುಲ್ ಬುರ್ದಾ ವಿವರಣೆ”, ಪ್ರಪಂಚ ಯಾತ್ರೆಯ ನೆನಪುಗಳನ್ನು ಬರೆದಿಟ್ಟ “ಪ್ರೋಪ್ರಸ್ಸಿಂಡೆ ಭಾಗ್ಯಂ” ಇವು ಅವರು ಬರೆದ ಪ್ರಮುಖ ಪುಸ್ತಕಗಳಾಗಿವೆ.
ಅತೀ ಸೂಕ್ಷ್ಮತೆಯಿಂದ ನಡೆದುಕೊಳ್ಳುವ ಜೀವನ ಶೈಲಿಯನ್ನು ಹೊಂದಿರುವ ಅವರು ಇಂದು ಭಾರತದಲ್ಲಿಯೂ ಹೊರ ದೇಶಗಳಲ್ಲಿಯೂ ಗುರುತಿಸಲ್ಪಟ್ಟ ಒಬ್ಬ ಯುವ ವಿಧ್ವಾಂಸರಾಗಿದ್ದಾರೆ.

ಈ ಸಮುದಾಯಕ್ಕಾಗಿ ಧೀರ್ಘ ಕಾಲ ಸೇವೆಗೈಯ್ಯಲು ಉಸ್ತಾದರಿಗೂ ಹಾಗೂ ಉಸ್ತಾದರಂತಹ ಉತ್ತಮ ಉತ್ತಮ ಗುಣ ನಡೆತೆ ನಮ್ಮದಾಗಿಸುವಲ್ಲೂ ಭಾಗ್ಯವ ನೀಡಿ ಅನುಗ್ರಹಿಸು ರಬ್ಬೇ.., ( ಆಮೀನ್ )

✍ ಕೆ.ಎಸ್.ಎಮ್ ಎಲಿಮಲೆ
(ಮೂಲ: ಮಲಯಾಳಂ)

error: Content is protected !! Not allowed copy content from janadhvani.com