janadhvani

Kannada Online News Paper

ಹಜ್ ಹಿನ್ನಲೆ: ಹರಮೈನ್ ರೈಲು ಯಾತ್ರಿಕರಿಗೆ ನಿಯಂತ್ರಣ

ಮಕ್ಕಾ: ಪವಿತ್ರ ಹಜ್ ಕರ್ಮಗಳಿಗಾಗಿ ತಯಾರಿ ನಡೆಸುವವುದ ಭಾಗವಾಗಿ ಶವ್ವಾಲ್ 25 ರಿಂದ ಹರಮೈನ್ ರೈಲು ಯಾತ್ರಿಕರಿಗೆ ನಿಯಂತ್ರಣ ಏರ್ಪಡಿಸಿರುವುದಾಗಿ ಹರಮೈನ್ ರೈಲ್ವೇ ತಿಳಿಸಿದೆ.

ಶವ್ವಾಲ್ 25ರಿಂದ ದುಲ್‌ಹಜ್ 10ರ ವರೆಗೆ ನಿಯಂತ್ರಣ ಮುಂದುವರಿಯಲಿದೆ. ಹಜ್ ಅನುಮತಿ ಪತ್ರ ಲಭಿಸಿದವರು, ಮಕ್ಕಾದಲ್ಲಿ ವಾಸ ಪರವಾನಗಿ ಇರುವ ಸ್ವದೇಶಿಗಳು ಮತ್ತು ವಿದೇಶೀಯರಿಗೆ ಈ ನಿಯಂತ್ರಣ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.