janadhvani

Kannada Online News Paper

ಜುಮಾ ಪ್ರಾರ್ಥನೆಗಾಗಿ ಸಂಚಾರ ನಿಷೇಧ- ಬಿಜೆಪಿಯಿಂದ ಧರಣಿ

ಹೌರ: ಮುಸ್ಲಿಮರು ಶುಕ್ರವಾರ ಪ್ರಾರ್ಥನೆ(ಜುಮಾ ನಮಾಜ್‌) ಸಲ್ಲಿಸಲು ರಸ್ತೆಯಲ್ಲಿ ಸಂಚಾರ ನಿಷೇಧಿಸಿರುವ ಕ್ರಮವನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಪಶ್ಚಿಮ ಬಂಗಾಳದ ಹೌರದಲ್ಲಿ ಬಾಲ್ಯಾ ಖಲ್‌ ಬಳಿ ರಸ್ತೆಯಲ್ಲಿ ಧರಣಿ ಕುಳಿತು ಹನುಮಾನ್‌ ಚಾಲಿಸಾ ಪಠಿಸಿದ್ದಾರೆ.

‘ಶುಕ್ರವಾರ ನಮಾಜ್‌ ಸಲ್ಲಿಸುವ ಕಾರಣ ಇಲ್ಲಿನ ಜಿ.ಟಿ ರಸ್ತೆಯನ್ನು ಬಂದ್‌ ಮಾಡಲಾಗುತ್ತದೆ. ಇದರಿಂದಾಗಿ ರೋಗಿಗಳು ಸೂಕ್ತ ಸಮಯಕ್ಕೆ ಆಸ್ಪತ್ರೆ ತಲುಪಲಾಗದೆ ಸಾವಿಗೀಡಾಗುತ್ತಾರೆ. ಜನರು ಸಮಯಕ್ಕೆ ಸರಿಯಾಗಿ ಕಚೇರಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಶುಕ್ರವಾರದ ಪ್ರಾರ್ಥನೆ ವರೆಗೆ ನಮ್ಮ ಪಠಣ ಮುಂದುವರಿಯಲಿದೆ’ ಎಂದು ಪಕ್ಷದ ಹೌರಾ ಜಿಲ್ಲಾ ಯುವ ಮೋರ್ಚಾದ ಒ.ಪಿ. ಸಿಂಗ್‌ ಹೇಳಿದ್ದಾರೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

‘ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಗ್ರ್ಯಾಂಡ್‌ ಟ್ರಂಕ್‌ ರಸ್ತೆ ಮತ್ತು ಇತರ ಮುಖ್ಯ ರಸ್ತೆಗಳನ್ನು ಶುಕ್ರವಾರದ ಪ್ರಾರ್ಥನೆಗಾಗಿ ನಿಷೇಧಿಸಲಾಗಿದೆ. ಇದರಿಂದಾಗಿ ರೋಗಿಗಳು ಸಾಯುತ್ತಾರೆ. ಜನರು ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಪ್ರಾರ್ಥನೆ ವೇಳೆ ರಸ್ತೆಯಲ್ಲಿ ಸಂಚಾರ ನಿಷೇಧವನ್ನು ಎಲ್ಲಿಯವರೆಗೆ ಮುಂದುವರೆಸುತ್ತಾರೊ ಅಲ್ಲಿಯವರೆಗೆ ನಾವೂ ಹನುಮಾನ್‌ ಮಂದಿರಗಳ ಸಮೀಪದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಹನುಮಾನ್‌ ಚಾಲಿಸಾವನ್ನು ಪಠಿಸುತ್ತೇವೆ’ ಎಂದು ಸಿಂಗ್‌ ಹೇಳಿದ್ದಾರೆ.

error: Content is protected !! Not allowed copy content from janadhvani.com