ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಕ್ಯಾಂಪಸ್ಸಿನಲ್ಲಿ ಕಾರ್ಯಾಚರಿಸುತ್ತಿರುವ ದಅವಾ ದರ್ಸ್ ಪ್ರಾರಂಭೋತ್ಸವವು ದಾರುನ್ನಜಾತ್ ಸಂಸ್ಥೆಯ ಅಧ್ಯಕ್ಷರಾದ ಶ್ಯೆಖುನಾ ಪಿ. ಕೆ ಅಬೂಬಕ್ಕರ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಸ್ತ ಕೇರಳ ಜಂಯ್ಯತುಲ್ ಉಲಮಾದ ಉಪಾಧ್ಯಕ್ಷರಾದ ಶೈಖುನಾ ತಾಜುಶ್ಶರೀಅಃ ಅಲಿಕುಂಞ ಉಸ್ತಾದ್ ದುವಾಶೀರ್ವಚನ ನೀಡಿ ನೂತನ ವರ್ಷದ ತರಗತಿಗೆ ಚಾಲನೆ ನೀಡಿದರು. ದಾರುಲ್ ಅಶ್ಅರಿಯ್ಯಾ ಸುರಿಬ್ಯೆಲ್ ಅಧ್ಯಕ್ಷರಾದ ಶೈಖುನಾ ಕೆ.ಎ ಮಹ್ಮೂದುಲ್ ಫೈಝಿ ವಾಲೆಮೊಂಡವು ಉಸ್ತಾದ್ ಸಭೆಯನ್ನು ಉಧ್ಘಾಟಿಸಿದರು.ದಾರುನ್ನಜಾತ್ ಮುದರ್ರಿಸರಾದ ಮುಹಮ್ಮದ್ ಫಾಲಿಳಿ ಅಲ್ ಕಾಮಿಲ್ ಸಖಾಫಿ (ಕೆಮ್ಮಾಯಿ)ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದರು.
ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಹಮೀದ್ ಕೊಡಂಗಾಯಿ. ಅಲ್ ಮದ್ರಸತುನ್ನವವಿಯ್ಯ ಟಿಪ್ಪು ನಗರ. ಅದ್ಯಾಪಕರಾದ ಅಬ್ದುಲ್ ರಝಾಕ್ ಸಹದಿ ಉಸ್ತಾದ್. ಹಾಗೂ ಹಾಫಿಳ್ ಶರೀಫ್ ಮುಸ್ಲಿಯಾರ್. ಅಲ್ ಮದರಸತುಲ್ ಖಿಲ್’ರಿಯ್ಯಾ ಕೊಡಂಗಾಯಿ ಅದ್ಯಾಪಕರಾದ. ಅಬ್ಬಾಸ್ ಮದನಿ ಉಸ್ತಾದ್. ಸಂಸ್ಥೆಯ ಕೋಶಾಧಿಕಾರಿ ಡಾ ಹಸೈನಾರ್. SMA ವಿಟ್ಲ ರೀಜ್ಯನಲ್ ಅಧ್ಯಕ್ಷರಾದ ಉಸ್ಮಾನ್ ಹಾಜಿ. ಎಸ್.ವೈ.ಎಸ್ ಟಿಪ್ಪುನಗರ ನಾಯಕರಾದ ಇಬ್ರಾಹಿಂ ಮೋನು. ಎಸ್ಸೆಸ್ಸೆಫ್ ಟಿಪ್ಪುನಗರ ಶಾಖಾ ನಾಯಕರಾದ ಅಬ್ದುಲ್ ಲತೀಫ್. ತಲಪಾಡಿ ಮಿನ್ಹಾಝ್ ಮಹಿಳಾ ಕಾಲೇಜಿನ ಎಂ.ಎಸ್.ಎಂ ಸಿರಾಜ್ ಕಕ್ಕಿಂಜೆ ಕೆಸಿಎಫ್ ಕತ್ತಾರ್ ನಾಯಕರಾದ ಮುಸ್ತಪ ಮುಡಿಪು ಸಹಿತ ಊರ ಪರವೂರ ಹಲವಾರು ಸುನ್ನಿ ಸಂಘ ಕುಟುಂಬದ ಕಾರ್ಯಕರ್ತರು ಉಪಸ್ಥಿತರಿದ್ದರು.
ದಾರುನ್ನಜಾತ್ ಮಹಿಳಾ ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಅಬ್ದುಲ್ ಖಾದರ್ ಫೈಝಿ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ