janadhvani

Kannada Online News Paper

ನಾಳೆ: ಮರಿಕ್ಕಳದಲ್ಲಿ ಸ್ವಲಾತ್ ವಾರ್ಷಿಕ

ಮೊಂಟೆಪದವು:ಮರಿಕ್ಕಳ ಜುಮಾ ಮಸ್ಜಿದ್ ವತಿಯಿಂದ ವಾರಕ್ಕೊಮ್ಮೆ ನಡೆಸುವ ಸ್ವಲಾತ್ ಮಜ್ಲಿಸ್ ನ ವಾರ್ಷಿಕೋತ್ಸವವು ಮರಿಕ್ಕಳ ಜುಮಾ ಮಸ್ಜಿದ್ ಅಧ್ಯಕ್ಷರಾದ ತಾಜುಲ್ ಫುಖಹಾಅ ಖಾಝಿ ಶೈಖುನಾ ಬೇಕಲ್ ಉಸ್ತಾದರ ಅಧ್ಯಕ್ಷತೆಯಲ್ಲಿ ಜೂನ್ 20 ಗುರುವಾರ ಸಂಜೆ 7:00 ಗಂಟೆಗೆ ಮರಿಕ್ಕಳ ಜುಮಾ ಮಸ್ಜಿದ್ ನಲ್ಲಿ ನಡೆಯಲಿರುವುದು.

ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲೈಲಿ ತಂಙಳ್ ಕಾಜೂರ ರವರು ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ನೀಡಲಿರುವರು.

ಕಾರ್ಯಕ್ರಮದಲ್ಲಿ ಮರಿಕ್ಕಳ ಜುಮಾ ಮಸ್ಜಿದ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ,ಸದರ್ ಉಸ್ತಾದ್ ಝೈನುಲ್ ಅಬಿದ್ ಸಖಾಫಿ,ಮುಅಲ್ಲಿಮರಾದ ರಮಳಾನ್ ಮದನಿ ಕಂಬ್ಲಬೆಟ್ಟು,ಜಬ್ಬಾರ್ ಸ ಅದಿ,ಮರಿಕ್ಕಳ ಜುಮಾ ಮಸ್ಜಿದ್ ಉಪಾಧ್ಯಕ್ಷ ಅಬ್ಬಾಸ್ ಕೊಡಂಚಲ್,ಕೋಶಾಧಿಕಾರಿ ಹನೀಫ್ ಎನ್.ಎಚ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮರಿಕ್ಕಳ ಜುಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.