janadhvani

Kannada Online News Paper

ಸಮಸ್ತ ಉಪಾಧ್ಯಕ್ಷರಾದ ತಾಜುಶ್ಶರೀಅಃ ಅಲಿಕುಂಞ ಉಸ್ತಾದ್ – ಇಂದು ಉದ್ಯಾನ ನಗರಿ ಬೆಂಗಳೂರಲ್ಲಿ

ಬೆಂಗಳೂರು.ಜೂ,19: ಭಾರತೀಯ ಮುಸ್ಲಿಮರ ಅಧಿಕೃತ ಧ್ವನಿ, ವಿಶ್ವವಿಖ್ಯಾತ ಪಂಡಿತ ಕೂಟ ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾದ ಬಹು: ತಾಜುಶ್ಶರೀಅಃ ಅಲಿಕುಂಞ ಉಸ್ತಾದ್ ಅವರು ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಬೆಳಿಗ್ಗೆ ಉದ್ಯಾನ ನಗರಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಇಂದು ಬೆಳಿಗ್ಗೆ ಶಿವಾಜಿನಗರದ ಮಸ್ಜಿದುನ್ನೂರಿನಲ್ಲಿ ಅನಸ್ ಸಿದ್ದೀಕಿ ಶಿರಿಯ ಉಸ್ತಾದರ ಸಾರಥ್ಯದಲ್ಲಿ ಆರಂಭಗೊಳ್ಳುವ ಸಿದ್ಧೀಕಿಯ್ಯಾ ದಅವಾ ದರ್ಸ್ ಉದ್ಘಾಟನೆ ಹಾಗು ಇಜಾಝತ್ ಜಲ್ಸಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ. ರಾತ್ರಿ 9 ಗಂಟೆಗೆ ಹಲಸೂರು ಮರ್ಕಝಲ್ ಹುಧಾದಲ್ಲಿ ನಡೆಯುವ ಸಿಎಂ ಮಡವುಾರು ವಲಿಯುಲ್ಲಾಹಿ (ಖ.ಸಿ) ಅವರ ಅಂಡ್ ನೇರ್ಚೆ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವರದಿ: ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ