janadhvani

Kannada Online News Paper

ಈಜಿಪ್ಟ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಮೊರ್ಸಿ ಕುಸಿದುಬಿದ್ದು ಮೃತ್ಯು

ಕೈರೋ,ಜೂ.17: ಈಜಿಪ್ಟ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಮೊರ್ಸಿ(67) ನಿಧನ. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

“ಅವರು ನ್ಯಾಯಾಧೀಶರ ಮುಂದೆ 20 ನಿಮಿಷಗಳ ಕಾಲ ಮಾತನಾಡಿದರು. ನಂತರ ಅವರು ಪ್ರಜ್ಞೆ ತಪ್ಪಿ ಕುಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟರು” ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೊಸ್ನಿ ಮುಬಾರಕ್ ರ 30 ವರ್ಷಗಳ ಆಳ್ವಿಕೆಯ ನಂತರ ಮೊರ್ಸಿ 2012ರಲ್ಲಿ ಈಜಿಪ್ಟ್ ನ ಪ್ರಥಮ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಅಧ್ಯಕ್ಷರಾದರು. 2013ರಲ್ಲಿ ಭಾರೀ ಪ್ರತಿಭಟನೆಗಳು ಮತ್ತು ಸೇನಾ ದಂಗೆಯ ನಂತರ ಅವರನ್ನು ಪದಚ್ಯುತಗೊಳಿಸಲಾಯಿತು. ನಂತರ ಅವರು ಪ್ರತಿನಿಧಿಸಿದ ಮುಸ್ಲಿಂ ಬ್ರದರ್ಹುಡ್ ಅನ್ನು ಕಾನೂನುಬಾಹಿರಗೊಳಿಸಲಾಯ್ತು.

ಹಮಾಸ್ ನೊಂದಿಗೆ ಸಹಕರಿಸಿದ ಆರೋಪದಲ್ಲಿ ಮುರ್ಸಿ ಮತ್ತು ಇತರ 23 ಮಂದಿ ಕೈರೋ ಅಪರಾಧ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದರು. 2016,ನವೆಂಬರ್ ನಲ್ಲಿ ನ್ಯಾಯಾಲಯವು ಮುರ್ಸಿ ಮತ್ತು ಇತರ 21 ಮಂದಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ರದ್ದು ಪಡಿಸಿ ಮರು-ವಿಚಾರಣೆಗೆ ಆದೇಶಿಸಿತು.

error: Content is protected !! Not allowed copy content from janadhvani.com