ಅಬುಧಾಬಿ: ವಾಹನಗಳಿಂದ ಕಸಗಳನ್ನು ಎಸೆಯುವವರಿಗೆ ಇನ್ನು ಮುಂದೆ ಗಂಡಾಂತರ ಕಾದಿದೆ. ಅಂತಹ ವಾಹನಗಳ ಚಾಲಕನಿಗೆ ಒಂದು ಸಾವಿರ ದಿರ್ಹಂ ದಂಡ ಮತ್ತು ಆರು ಕಪ್ಪು ಚುಕ್ಕೆಗಳು ಲಭಿಸಲಿದೆ. ಟ್ರಾಪಿಕ್ ನಿಯಮಗಳು ಮತ್ತು ಕ್ರಮಗಳನ್ನು ಪಾಲಿಸಿ, ಸಾಮಾಜಿಕ ಪರಿಸರ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ವಾಹನಗಳಿಂದ ಕಸಗಳನ್ನು ಎಸೆಯುವುದರ ಮೂಲಕ ಅದು ಗಂಭೀರ ಪರಿಸರ ಮಾಲಿನ್ಯಕ್ಕೆ ಕಾರಣವಾಗಲಿದೆ ಎಂದು ಪೊಲೀಸರು ತಿಳಿಸಿದ್ದು, ಟ್ರಾಫಿಕ್ ಪಟ್ರೋಲಿಂಗ್ ಮತ್ತು ಸ್ಮಾರ್ಟ್ ವಿಧಾನಗಳ ಮೂಲಕ ಚಾಲಕರ ಚಲನವಲನಗಳನ್ನು ನಿರೀಕ್ಷಿಸಿ, ಕಾನೂನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.