ಬಿಶ್ಕೆಕ್,ಜೂನ್.13: ಇಂದು ಸೆಂಟ್ರಲ್ ಏಷ್ಯಾದ ಕಿರ್ಗಿಸ್ತಾನ ರಾಜಧಾನಿ ಬಿಶ್ಕೆಕ್ ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಜೊತೆಗೆ ನರೇಂದ್ರ ಮೋದಿಯವರು ಪ್ರಮುಖ ವಿಚಾರಗಳ ಸುತ್ತ ಮಾತುಕತೆ ನಡೆಸಿದರು.
ಉಗ್ರರ ಜೊತೆಗೂಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಇವರ ಭಯೋತ್ಪಾದನೆಯಿಂದಾಗಿ ಭಾರತ ತೊಂದರೆ ಅನುಭವಿಸುತ್ತಿದೆ. ಹಾಗಾಗಿ ಉಭಯ ದೇಶಗಳ ವಿಚಾರದಲ್ಲಿ ಶಾಂತಿಯುತ ಮಾತುಕತೆ ಕಷ್ಠ ಎಂದು ಹೇಳಿದ್ದಾರೆ.
ಮೊದಲಿಗೆ ಕಿರ್ಗಿಸ್ತಾನದ ಬಿಶ್ಕೆಕ್ಗೆ ಪ್ರಧಾನಿ ಮೋದಿಯವರು ಪಾಕ್ ವಾಯುಮಾರ್ಗ ಮೂಲಕ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಪ್ರಧಾನಿ ವಿಮಾನ ಪಾಕಿಸ್ತಾನದ ವಾಯುಮಾರ್ಗದಲ್ಲಿ ಸಂಚರಿಸಲಿದೆ ಎಂದು ಪಾಕಿಸ್ತಾನದ ಬಳಿ ಭಾರತ ತಾತ್ವಿಕ ಒಪ್ಪಿಗೆಯೂ ಪಡೆದಿತ್ತು. ಬಳಿಕ ಪ್ರಧಾನಿ ಮೋದಿ ಪಾಕ್ ವಾಯುಮಾರ್ಗದಲ್ಲಿ ತೆರಳದೇ ಮಾರ್ಗ ಬದಲಿಸಿದ್ದಾರೆ. ಒಮನ್, ಇರಾನ್ ಮೂಲಕ ಬಿಶ್ಕೆಕ್ಗೆ ಆಗಮಿಸಿ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.