janadhvani

Kannada Online News Paper

ಪುತ್ತೂರಿನ ಹೃದಯ ಭಾಗದಲ್ಲಿ ಸುನ್ನೀ ಮದ್ರಸ-ದಾಖಲಾತಿ ಆರಂಭ

ಪುತ್ತೂರು: ವಾಣಿಜ್ಯೋದ್ಯಮದಲ್ಲಿ ಶೀಘ್ರ ಬೆಳವಣಿಗೆ ಹೊಂದುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ದ್ವಿತೀಯ ವಾಣಿಜ್ಯ ಕೇಂದ್ರ, ಸುಂದರ ನಗರ ಪ್ರದೇಶವಾದ ಪುತ್ತೂರಿನಲ್ಲಿ ವಾಸ್ತವ್ಯವಿರುವ ಸುನ್ನಿ ಮುಸ್ಲಿಮರ ಬಹುಕಾಲದ ಬೇಡಿಕೆ ಈಡೇರಿದೆ.

ಇಸ್ಲಾಮಿನ ನೈಜ ಆಶಯದಲ್ಲಿ ಕಲಬೆರಕೆ ಮಾಡುವ ನೂತನವಾದಿಗಳೊಂದಿಗೆ ಯಾವುದೇ ರಾಜಿ ಇಲ್ಲದೆ. ಸುಂದರವಾದ ಇಸ್ಲಾಮಿನ ಚೌಕಟ್ಟಿನಲ್ಲಿ ಸುನ್ನತ್ ಜಮಾಅತಿನ ನೈಜ ತತ್ವಾದರ್ಶಗಳನ್ನು ಮಕ್ಕಳಿಗೆ ಬೋಧಿಸುವ ಸುನ್ನೀ ಮದ್ರಸವೆಂಬ ಕನಸು ನನಸಾಗಿದೆ.

ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರು ನೇತೃತ್ವ ನೀಡುತ್ತಿರುವ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಸಿಲೆಬಸ್ ಪ್ರಕಾರ ಕಲಿಸುವ ಸುನ್ನೀ ಮದ್ರಸವು ಆರಂಭಗೊಂಡಿದ್ದು, ಇದೀಗ ದಾಖಲಾತಿ ನಡೆಯುತ್ತಿದೆ.

ಮದ್ರಸ ತರಗತಿಗಳು ಸ್ಮಾರ್ಟ್ ಕ್ಲಾಸ್ ಗಳ ಮೂಲಕ ನಡೆಯಲಿದ್ದು ವಿದ್ಯಾರ್ಥಿಗಳ ಸರ್ವತೋನ್ಮುಖ ದೀನೀ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಈ ಮದರಸವನ್ನು ತೆರೆಯಲಾಗಿದೆ. ಪುತ್ತೂರು ಪಟ್ಟಣದಲ್ಲಿ ವಾಸ್ತವ್ಯವಿರುವ ಸುನ್ನಿಗಳು ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸಲು ಕೆಳಗಡೆ ನೀಡಿದ ನಂಬರಿನಲ್ಲಿ ಸಂಪರ್ಕಿಸಿರಿ.
9741031388 – 7338221839 – 7760943430 –

ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com