ಮಕ್ಕಾ: ಉಮ್ರಾ ,ಝಿಯಾರತ್‌ಗೆ ಆಗಮಿಸಿದ ಯಾತ್ರಾರ್ಥಿಗಳಿಗೆ ಕಳಪೆ ಮಟ್ಟದ ಸೇವೆ ಒದಗಿಸಿರುವುದಕ್ಕಾಗಿ ವಿವಿಧ ಉಮ್ರಾ ಕಂಪೆನಿಗಳಿಗೆ ಸೌದಿ ಅರೇಬಿಯಾ ಭಾರೀ ಮೊತ್ತದ ದಂಡ ವಿಧಿಸಿದೆ. ಆಧ್ಯಾತ್ಮಿಕ ಯಾತ್ರಿಕರಿಂದ ಪಡೆದ ಮೊತ್ತದ ಇಪ್ಪತ್ತೈದು ಶೇಕಡಾ ಮೊತ್ತವನ್ನು ವಿಧಿಸಲಾಗಿದೆ.
ಹಜ್-ಉಮ್ರಾ ಸಚಿವಾಲಯವು ದಂಡ ವಿಧಿಸಿದ್ದು, ಯಾತ್ರಿಕರಿಗೆ ಸಮಯಕ್ಕೆ ಸರಿಯಾಗಿ ಸೇವೆ ಒದಗಿಸಿಲ್ಲ ಎನ್ನುವ ದೂರನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ವಾಸ, ಯಾತ್ರೆ ಮುಂತಾದವುಗಳನ್ನು ವಿಳಂಬಗೊಳಿಸಿದ ಸಂಸ್ಥೆಗಳಿಗೂ ದಂಡ ವಿಧಿಸಲಾಗಿದ್ದು, ಯಾತ್ರಿಕರಿಂದ ಪಡೆದ ಮೊತ್ತದ ಇಪ್ಪತ್ತೈದು ಶೇಕಡಾ ದಂಡ ಪಾವತಿಸಬೇಕಾಗುತ್ತದೆ. ಒಂದು ವಾರ ಸಮಯಾವಕಾಶ ನೀಡಲಾಗಿದ್ದು, ವಿಳಂಬಗೊಂಡಲ್ಲಿ ಅವರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಸೌದಿಯಲ್ಲಿ ಹಜ್-ಉಮ್ರಾ ಸೇವೆಗೆ ಹಲವು ಮಾನದಂಡಗಳಿದ್ದು, ಅವುಗಳನ್ನು ಪಾಲಿಸದವರಿಗೆ ಬಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತಿದೆ.