ಜಿದ್ದಾ: ಮಕ್ಕಾದಲ್ಲಿ ಇಸ್ಲಾಮಿಕ್ ಶೃಂಗಸಭೆ, ತುರ್ತು ಗಲ್ಫ್-ಅರಬ್ ಶೃಂಗಸಭೆ ನಡೆಯುವ ಸಂದರ್ಭಗಳಲ್ಲಿ ರಾಷ್ಟ್ರ ನಾಯಕರು ಹಾದು ಹೋಗುವ ರಸ್ತೆಗಳಲ್ಲಿನ ಓಡಾಟವನ್ನು ತಪ್ಪಿಸಿ ಅನ್ಯ ರಸ್ತೆಗಳನ್ನು ಅವಲಂಬಿಸುವಂತೆ ಉಮ್ರಾ ಸುರಕ್ಷಾ ಸೇನೆಯ ಅಸಿಸ್ಟೆಂಟ್ ಕಮಾಂಡರ್, ಸೌದಿ ಪೊಲೀಸ್ ಉನ್ನತಾಧಿಕಾರಿ ಮೇಜರ್ ಜನರಲ್ ಮುಹಮ್ಮದ್ ಅಲ್ ಬಸ್ಸಾಮಿ ತಿಳಿಸಿದ್ದಾರೆ.
ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ರಸ್ತೆ, ಅಲ್ ಅಂದಲೂಸ್ ರಸ್ತೆ, ಸೀಫೋರ್ಟ್ ಫ್ಲೈ ಓವರ್, ಪೂರ್ವ ಮಕ್ಕಾದ ಥರ್ಡ್ ರಿಂಗ್ ರಸ್ತೆ, ಅಝೀಝಿಯಾ ರಸ್ತೆ, ಅಲ್ ಸದ್ದ್ ಟನಲ್ ಮುಂತಾದ ರಸ್ತೆಗಳನ್ನು ಮುಕ್ತಗೊಳಿಸಬೇಕು. ಅದೇ ರೀತಿ ಶೃಂಗಸಭೆ ನಡೆಯವ ಸಮಯದಲ್ಲಿ ಪವಿತ್ರ ಹರಮ್ ಪರಿಸರಕ್ಕೆ ತೆರಳುವ ಸಣ್ಣ ವಾಹನಗಳಿಗೆ ನಿಯಂತ್ರಣ ಏರ್ಪಡಿಸಲಾಗುವುದು. ಹರಮ್‌ಗೆ ತೆರಳುವ ಅಥವಾ ಮರುಳುವರು ಬಸ್‌ಗಳನ್ನೇ ಬಳಸುವಂತೆ ಅಲ್ ಬಸ್ಸಾಮಿ ತಿಳಿಸಿದ್ದಾರೆ. ಮೇ 30, 31ಕ್ಕೆ ಶೃಂಗಸಭೆ ನಡೆಯಲಿದೆ.