ರಿಯಾದ್: ಸೌದಿ ಅರೇಬಿಯಾದಲ್ಲಿನ ಜೈಲು ಖೈದಿಗಳಿಗೆ ಕೆಲಸ ನೀಡುವ ಯೋಜನೆ ಆರಂಭಿಸಲಿದೆ. ಈ ಬಗ್ಗೆ ವಿವಿಧ ಇಲಾಖೆಗಳ ಮಧ್ಯೆ ಒಪ್ಪಂದ ಏರಪಡಿಸಲಾಗಿದ್ದು, ಬಲಿ ಮಾಂಸವನ್ನು ಪ್ರಯೋಜನಗೊಳಿಸುವ ಯೋಜನೆಯ ವಿವಿಧ ವಲಯಗಳಲ್ಲಿ ಅವರನ್ನು ನಿಯುಕ್ತಿಗೊಳಿಸಲಾಗುತ್ತದೆ.
ಹಜ್ ಕಾಲಾವಧಿಯಲ್ಲಿ ಜೈಲು ಶಿಕ್ಷೆ ಅನುಭವಿಸುವವರು ಮತ್ತು ಜೈಲುಮುಕ್ತಿಗೊಂಡ ಸ್ವದೇಶೀಯರಿಗೂ ಕೆಲಸ ನೀಡಲಾಗುತ್ತದೆ.ಈ ಹಜ್ ಕಾಲದಲ್ಲಿ ಪ್ರಥಮವಾಗಿ ಯೋಜನೆ ಆರಂಭಗೊಳ್ಳಲಿದ್ದು, ಪುಣ್ಯ ಸ್ಥಳಗಳಲ್ಲಿನ ಬಲಿದಾನ ಕೇಂದ್ರಗಳಲ್ಲಿ ಕೆಲಸ ನೀಡುವುದಾಗಿದೆ ಯೋಜನೆ.
ಉಸ್ತುವಾರಿ, ತಾಂತ್ರಿಕ ವಲಯದಲ್ಲಿ ಕೆಲಸ ನೀಡಲಾಗುತ್ತಿದ್ದು, ಜೈಲು ಖಾತೆ ಮತ್ತು ಬಲಿಮಾಂಸ ಸರಬರಾಜು ಖಾತೆಯ ಅಧಿಕಾರಿಗಳು ಈ ಬಗ್ಗೆ ಕರಡು ರೂಪಿಸಿದ್ದಾರೆ. ಪ್ರತೀಯೊಬ್ಬರ ಯೋಗ್ಯತೆಯನುಸಾರ ಕೆಲಸ ದೊರೆಯಲಿದ್ದು, ಅವರ ಯೋಗ್ಯತೆಯನ್ನು ಉಪಯೋಗಪಡಿಸುವುದು ಮತ್ತು ಅವರನ್ನು ಉದ್ಯೋಗದಲ್ಲಿ ಪ್ರವೇಶಗೈಯ್ಯುವಂತೆ ಪ್ರೇರೆಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ವರ್ಷದಿಂದ ಈ ಯೋಜನೆ ಜಾರಿಯಾಗಲಿದೆ.