janadhvani

Kannada Online News Paper

ದುಬೈ ಹೋಲಿ ಖುರ್ಆನ್ ಅವಾರ್ಡ್: ಇಂದು ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಉಪನ್ಯಾಸ- ಯಶಸ್ವಿಗೆ ಕರೆ

ದುಬೈ:ದುಬೈ ಇಪ್ಪತ್ತಮೂರನೇ ಅಂತರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ ಪ್ರಯುಕ್ತ ನಡೆಸಲ್ಪಡುವ ರಂಝಾನ್ ಪ್ರಭಾಷಣ ಕಾರ್ಯಕ್ರಮದಲ್ಲಿ ದುಬೈ ಜಾಮಿಅ ಸಅದಿಯ್ಯ ಅರಬಿಯ್ಯ ಇಂಡಿಯನ್ ಸೆಂಟರ್ ಪ್ರತಿನಿಧಿಯಾಗಿ ಎಸ್ ವೈ ಎಸ್ ಕೇರಳ ರಾಜ್ಯ ಉಪಾದ್ಯಕ್ಷ ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಮತ್ತು ಅಸ್ಸಯ್ಯಿದ್ ಬಾಯಾರ್ ತಂಘಳ್ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವು ಮೇ 15ನೇ ಬುದವಾರ ದುಬೈ ಊದ್ ಮೆಹ್ತಾ ರಸ್ತೆಯ ಅಲ್ ಜದ್ದಾಫ್ ನಲ್ಲಿರುವ ಅಲ್ ವಸಲ್ ಕ್ಲಬ್ ನಲ್ಲಿ ರಾತ್ರಿ ಒಂಭತ್ತು ಗಂಟೆಗೆ ನಡೆಯಲಿದೆ. ಕಳೆದ ವರ್ಷಗಳಂತೆ ಈ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ವಿಶ್ವಾಸಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕುರ್ಆನ್ ಅವತೀರ್ಣಗೊಳಿಸಿದ ಪವಿತ್ರ ರಂಝಾನಿನಲ್ಲಿ ಕುರ್ಆನಿನ ಸಂದೇಶವನ್ನು ಜನರಿಗೆ ತಲುಪಿಸಲು ಮತ್ತು ಕುರ್ಆನ್ ಅಧ್ಯಯನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದುಬೈ ಸರಕಾರವು ಕಳೆದ ಇಪ್ಪತ್ತಮೂರು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ಯೋಜನೆಗಳಲ್ಲಿ ಅತ್ಯಂತ ಮಹತ್ವಪೂರ್ಣವಾದ ಕಾರ್ಯಕ್ರಮವಾಗಿದೆ.

ರಂಝಾನ್ ಪ್ರಭಾಷಣ ಕಾರ್ಯಕ್ರಮವನ್ನು ಯಶಸ್ವೀಗೊಳಿಸಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಸಂಘಟಕರು ನಡೆಸುತ್ತಿದ್ದು ಮೀಡಿಯಾ ಮುಖಾಂತರ ಜನರನ್ನು ನೇರವಾಗಿ ಸಂಪರ್ಕಿಸಿ ಕಾರ್ಯಕ್ರಮಕ್ಕೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪ್ರವಾಸಿ ಮಹಿಳೆಯರಿಗೆ ವಿಶೇಷ ಸ್ಥಳವಕಾಶವನ್ನು ಏರ್ಪಡಿಸಲಾಗಿದೆ. ವಿವಿಧ ಎಮಿರೇಟ್ಸ್ ಗಳಿಂದ ಬರುವ ವಿಶ್ವಾಸಿಗಳಿಗೆ ವಿಶೇಷ ಬಸ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಕಾರ್ಯಾಕ್ರಮದ ಯಶಸ್ವಿಗಾಗಿ ಪ್ರತಿಯೊಬ್ಬ ಕನ್ನಡಿಗನೂ ಕೈಜೋಡಿಸಬೇಕೆಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಯು.ಎ.ಇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com