ಮಾರಕ ಔಷಧಿ ನೀಡಿ 300 ರೋಗಿಗಳನ್ನು ಕೊಂದ ನರ್ಸ್!

ಓಲ್ಡೇನ್‍ಬರ್ಗ್(ಜರ್ಮನಿ), ಮೇ 12- ಕೇವಲ ಐದು ವರ್ಷಗಳಲ್ಲಿ 300ಕ್ಕೂ ಹೆಚ್ಚು ಜನರನ್ನು ಕೊಂದು ಹಾಕಿದ ಜರ್ಮನಿಯ ನರ್ಸ್, ಈಗ ಜೀವಾಧಿ ಶಿಕ್ಷೆ ಅನುಭವಿಸುತ್ತಿದ್ದು ಈ ಹತ್ಯಾಕಾಂಡದ ತನಿಖೆ ಪ್ರಗತಿಯಲ್ಲಿದೆ.

ಜರ್ಮನಿಯ ಓಲ್ಡೇನ್‍ಬರ್ಗ್ ನಗರದ ಡೆಲ್‍ಮೆನ್ ಹೊಸ್ರ್ಟ್ ಹಾಸ್ಪಿಟಲ್‍ನ ನರ್ಸ್ ನೀಲ್ಸ್ ಹೋಗೆಲ್(42). 300ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ನರರಾಕ್ಷಸ ಈತನಿಂದ ಹತ್ಯೆಯಾದವರಲ್ಲಿ ಬಹುತೇಕ ಮಂದಿ ರೋಗಿಗಳೇ ಆಗಿದ್ದಾರೆ.

ಆಸ್ಪತ್ರೆಗೆ ದಾಖಲಾಗುವ ರೋಗಿಗಳು ತನ್ನ ಶೂಶ್ರುಷೆಗೆ ಒಳಪಟ್ಟಾಗ ಈ ಕ್ರೂರಿ ಅವರಿಗೆ ವಿಷಪೂರಿತ ಇಂಜೆಕ್ಷನ್ ನೀಡಿ, ಮಾರಕ ಔಷಧಿ ಕೊಟ್ಟು ಅಥವಾ ಉಸಿರುಗಟ್ಟಿಸಿ ಕೊಂದು ಹಾಕುತ್ತಿದ್ದ ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದವರು ರೋಗ ಉಲ್ಬಣದಿಂದ ಸಾವನ್ನಪ್ಪಿರಬಹುದೆಂದು ತಿಳಿದು ಉನ್ನತ ವೈದ್ಯರು ಶವಗಳನ್ನು ಅವರ ಕುಟುಂಬ ವರ್ಗದವರಿಗೆ ಹಸ್ತಾಂತರಿಸುತ್ತಿದ್ದರು.

2000 ಇಸವಿಯಿಂದ ಕೇವಲ ಐದು ವರ್ಷದಲ್ಲಿ 300ಕ್ಕೂ ಹೆಚ್ಚು ಹತ್ಯೆಗಳನ್ನು ಮಾಡಿದ್ದಾನೆ.
ಇಬ್ಬರು ರೋಗಿಗಳ ಸಂಶಯಾಸ್ಪದ ಸಾವಿನ ಜಾಡು ಬೆನ್ನಟ್ಟಿ ಹೋದ ತನಿಖಾ ಅಧಿಕಾರಿಗಳಿಗೆ ನೀಲ್ ಹೋಗೆಲ್‍ನ ಭಯಾನಕ ಕೃತ್ಯಗಳು ಬೆಳಕಿಗೆ ಬಂತು.

ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಈತ ತಾನು 43 ಕೊಲೆಗಳನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಆದರೆ ಇನ್ನೂ 52 ಹತ್ಯೆ ಪ್ರಕರಣಗಳೂ ತನಗೆ ಸಂಬಂಧಿಸಿಲ್ಲ ಎಂದು ನೀಲ್ ಹೇಳಿದನಾದರೂ ಅನುಮಾನದ ಮುಳ್ಳು ಅವನತ್ತಲೇ ನೆಟ್ಟಿದೆ.

ಕೆಲ ಹತ್ಯೆ ಪ್ರಕರಣಗಳು ಸಾಬೀತಾದ ಹಿನ್ನೆಲೆಯಲ್ಲಿ ನರರಾಕ್ಷಸನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2006ರಿಂದ ಈವರೆಗೆ ಮೂರು ತೀರ್ಪುಗಳು ಈತನ ವಿರುದ್ಧ ಹೊರಬಿದಿದ್ದು, 100 ಕೊಲೆ ಪ್ರಕರಣಗಳು ಈತನೇ ಮಾಡಿದ್ದಾನೆಂಬುದು ದೃಢಪಟ್ಟಿದೆ. ಆದರೆ ಉಳಿದ ಕಗ್ಗೊಲೆಗಳ ತನಿಖೆ ಪ್ರಗತಿಯಲ್ಲಿದೆ.

ರೋಗಿಗಳ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದ, ನೀಲ್ ಅವರನ್ನೇ ತನ್ನ ಬಲಿಯಾಗಿ ಮಾಡಿಕೊಂಡಿದ್ದ. ತೀವ್ರ ನಿಗಾಘಟಕ(ಐಸಿಯು)ದಲ್ಲಿ ಇದ್ದ ರೋಗಿಗಳೇ ಈತನ ಟಾರ್ಗೆಟ್ ಆಗುತ್ತಿದ್ದರು.

ವಿಚಾರಣೆ ಸಂದರ್ಭದಲ್ಲಿ ತನ್ನ ಕೃತ್ಯಕ್ಕೆ ಒಂದೊಂದು ಬಾರಿ ಒಂದೊಂದು ಕಾರಣ ಹೇಳಿಕೆ ನೀಡಿ ತನಿಖಾ ಅಧಿಕಾರಿಗಳನ್ನು ಗೊಂದಲಕ್ಕೆ ಸಿಲುಕಿಸಿದ. ಈ ಬಗ್ಗೆ ಈಗಲೂ ತನಿಖೆ ಮುಂದುವರೆದಿದೆ.

ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳುವಂತೆ ಈತ ಜರ್ಮನ್ ಸರ್ವಾಧಿಕಾರಿ ಹಿಟ್ಲರ್‍ನ ನಾಝಿ ಆಡಳಿತದಲ್ಲಿ ಯಹೂಧಿರನ್ನು ಕೊಲ್ಲುತ್ತಿದ್ದ ವಿಧಾನವನ್ನು ಹೋಲುತ್ತಿದೆ. ಈತ ಐದು ವರ್ಷಗಳಲ್ಲಿ 300ಕ್ಕೂ ಹೆಚ್ಚು ಮುಗ್ಧರನ್ನು ಕೊಂದಿದ್ದಾನೆ.

15ವರ್ಷಗಳಾದರೂ ಈ ತನಿಖೆ ಇನ್ನು ಪೂರ್ಣಗೊಂಡಿಲ್ಲ. ನೀಲ್‍ನ ಘೋರ ಅಪರಾಧ ಕೃತ್ಯಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಕ್ರಿಶ್ಚಿಯನ್ ಮ್ಯಾಕ್ ಬೇಕ್ ಒತ್ತಾಯಿಸಿದ್ದಾರೆ. ಮ್ಯಾಕ್‍ನ ತಾತಾನನ್ನು ನೀಲ್ ನಿರ್ದಯವಾಗಿ ಕೊಂದು ಹಾಕಿದ್ದ. ವಿಶ್ವದ ಅತ್ಯಂತ ಭಯಾನಕ ಮತ್ತು ಕ್ರೂರ ಸರಣಿ ಹಂತಕರಲ್ಲಿ ಈತನು ಒಬ್ಬ.ಇವನ ಘೋರಕೃತ್ಯಗಳಿಂದ ಜರ್ಮನ್ ಬೆಚ್ಚಿಬಿದ್ದಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!