ಮಕ್ಕ: ಸ್ಥಳೀಯ ಹಾಜಿಗಳಿಗೆ ಕಡಿಮೆ ವೆಚ್ಚದಲ್ಲಿ ಹಜ್ ನಿರ್ವಹಿಸುವ ಸಲುವಾಗಿ ನಾಲ್ಕನೇಯ ಪ್ಯಾಕೇಜೊಂದನ್ನು ಈ ವರ್ಷದಿಂದ ಜಾರಿಗೆ ತರಲಾಗುತ್ತಿದೆ. ಸ್ಥಳೀಯ ಹಜ್ ಕಂಪೆನಿಗಳ ಕೋರ್ಡಿನೇಶನ್ ಕೌನ್ಸಿಲ್ ಚೇರ್ಮನ್ ಅಬ್ದುರ್ರಹ್ಮಾನ್ ಅಲ್ ಹಖಬಾನಿಯವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಸ್ಥಳೀಯರಿಗೆ ಹಜ್ ನಿರ್ವಹಿಸಲು ಜನರಲ್ ಪ್ಯಾಕೇಜ್, ಲೋ ಫಯರ್ ಪ್ಯಾಕೇಜ್, ಸಿಂಪಲ್ ಪ್ಯಾಕೇಜ್ ಎನ್ನುವ ಮೂರು ಪ್ಯಾಕೇಜ್‌ಗಳಿದ್ದು, ನಾಲ್ಕನೇ ಪ್ಯಾಕೇಜ್ ಮೂಲಕ ಇವೆಲ್ಲಕ್ಕಿಂತಲೂ ಕಡಿಮೆ ದರದಲ್ಲಿ ಹಜ್ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಹಖಬಾನಿ ಹೇಳಿದ್ದಾರೆ.
ಉತ್ತಮ ಗುಣಮಟ್ಟದ ಸೇವೆಯೊಂದಿಗೆ ಕಡಿಮೆ ವೆಚ್ಚದಲ್ಲಿ ವಿದೇಶೀ ಮತ್ತು ಸ್ವದೇಶಿಗಳು ಹಜ್ ನಿರ್ವಹಿಸಲು ನಾಲ್ಕನೇ ಪ್ಯಾಕೇಜ್ ಅನ್ನು ಜಾರಿಗೆ ತರಲಾಗುತ್ತದೆ.
ಇದರ ಹೊರತಾಗಿ ಕಡಿಮೆ ವೆಚ್ಚದ ಪ್ಯಾಕೇಜ್ ಕ್ವಾಟಾವನ್ನು ಇನ್ನಷ್ಟು ಹೆಚ್ಚಿಸಲಾಗುವುದು.ಹೊಸ ನಾಲ್ಕನೇ ಪ್ಯಾಕೇಜನ್ನು ಜನರಲ್ ಪ್ಯಾಕೇಜ್‌ನ ಕ್ಯಾಟಗರಿಯಿಂದ ಹೆಚ್ಚಿನ ಸೀಟುಗಳನ್ನು ಕಂಡುಕೊಳ್ಳಲಾಗುತ್ತವೆ. ಕಡಿಮೆ ವೆಚ್ಚದ ಇತರ ಸೀಟುಗಳನ್ನು ಕಡಿತಗೊಳಿಸಲಾಗುವುದಿಲ್ಲ. ಹೊಸ ಪ್ಯಾಕೇಜ್ ನ ದರ ನಿಗದಿಪಡಿಸಲು ಕಿಂಗ್ ಅಬ್ದುಲ್ ಅಝೀಝ್ ಯುನಿವರ್ಸಿಟಿ ಯ ಒಂದು ವಿಭಾಗವು ಅಧ್ಯಯನ ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.