ನವದೆಹಲಿ:ಪ್ಲಾಸ್ಟಿಕ್ ಆಧಾರ್ , ಆಧಾರ್ ಸ್ಮಾರ್ಟ್, ಪಿವಿಸಿ ಆಧಾರ್ ಕಾರ್ಡ್ ಮುಂತಾದವುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಯುಐಡಿಎಐ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಇಂತಹ ಕಾರ್ಡ್ ಗಳಿಂದ ಆಧಾರ್ ವಿವರಗಳ ಗೌಪ್ಯತೆಗೆ ಅಪಾಯವಿದೆ. ಅಲ್ಲದೇ ಅನೇಕ ಬಾರಿ ನಿಮ್ಮ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಕೆಲಸ ಮಾಡುವುದಿಲ್ಲ. ಅನಧಿಕೃತ ಮುದ್ರಣದಿಂದ ಕ್ಯೂಆರ್ ಕೋಡ್ ಸಂಪರ್ಕ ಕಡಿತಗೊಳ್ಳುತ್ತದೆ. ಆಗ ಆಧಾರ್ ವಿವರ ಸೋರಿಕೆಯಾಗುತ್ತದೆ. ಆದಕಾರಣ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಅಥವಾ ಆಧಾರ್ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಬೇಡಿ ಎಂದು ಯುಐಡಿಎಐ ತಿಳಿಸಿದೆ.
ಅಲ್ಲದೇ ಪ್ಲಾಸ್ಟಿಕ್ ಆಧಾರ್ ಕಾರ್ಡ್ ರೆಡಿ ಮಾಡಲು 50 ರೂಪಾಯಿ ಬದಲು 300 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಹಾಗಾಗಿ ಒಂದು ಖಾಲಿ ಹಾಳೆಯಲ್ಲಿ ಮುದ್ರಣಗೊಂಡ ಆಧಾರ್ ಮಾನ್ಯವಾಗುತ್ತದೆ. ಕಲರ್ ಪ್ರಿಂಟಿಂಗ್ ಅಗತ್ಯವೂ ಇಲ್ಲವೆಂದು ಯುಐಡಿಎಐ ಹೇಳಿದೆ. ಹಾಗೇ ನಿಮ್ಮ ಆಧಾರ್ ಕಾರ್ಡ್ ಕಳೆದಿದ್ದರೆ https://eaadhaar.uidai.gov.in ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.