janadhvani

Kannada Online News Paper

ಲತೀಫ್ ಸುಂಟಿಕೊಪ್ಪರಿಗೆ ಪಿತೃ ವಿಯೋಗ-KSWA ಯುಎಇ ಸಂತಾಪ

ಸುಂಟಿಕೊಪ್ಪ,ಏ.28:ಕೊಡಗು ಜಿಲ್ಲೆಯ ಸುನ್ನೀ ಉಮರಾ ನಾಯಕ, ಸಮಾಜ ಸೇವಕ, ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಪಿ.ಎಂ.ಲತೀಫ್ ಸುಂಟಿಕೊಪ್ಪ ಅವರ ತಂದೆ ಪಿ.ವಿ.ಮುಹಮ್ಮದ್ (84) ಕಳೆದ ರಾತ್ರಿ ನಿಧನರಾಗಿದ್ದು, ಕೊಡಗು ಸುನ್ನಿ ವೆಲ್ಫೇರ್ ಅಸ್ಸೊಸಿಯೆಷನ್ (KSWA) ಯುಎಇ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮೃತರ ಹೆಸರಿನಲ್ಲಿ ದುಆ ಮತ್ತು ಮಯ್ಯಿತ್ ನಮಾಝ್ ನಿರ್ವಹಿಸುವಂತೆಯೂ, ಸಾಧ್ಯವಾದಷ್ಟು ತಹಲೀಲ್ ಸಮರ್ಪಿಸಲು KSWA ಯುಎಇ ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ ಹಾಗೂ ಪ್ರಧಾನ ಕಾರ್ಯದರ್ಶಿ ಮಶೂದ್ ಹಾಕತ್ತೂರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.