ನವದೆಹಲಿ, ಏ.26:- ಪ್ರಧಾನಿ ಮೋದಿ ಕುರಿತ ಚಲನಚಿತ್ರವನ್ನು ಲೋಕಸಭೆ ಚುನಾವಣೆ ಪೂರ್ಣಗೊಳ್ಳುವವರೆಗೆ ಪ್ರದರ್ಶನ ತಡೆಹಿಡಿಯಬೇಕೆಂದು ಚುನಾವಣಾ ಆಯೋಗ ಸಲ್ಲಿಸಿದ್ದ ವರದಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾ ನಿರ್ಮಾಪಕ ಸಂದೀಪ್ ವಿನೋದ್ ಕುಮಾರ್ ಸಿನಿಮಾ ಬಿಡುಗಡೆ ತಡೆಹಿಡಿಯುವಂತೆ ಆಯೋಗ ಸಲ್ಲಿಸಿದ್ದ ವರದಿಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ದೀಪಕ್ ಗುಪ್ತಾ ಹಾಗೂ ಸಂಜೀವ್ ತನ್ನ ತ್ರಿಸದಸ್ಯ ಪೀಠ ಮೇಲ್ಮನವಿಯನ್ನು ವಜಾಗೊಳಿಸಿದೆ.
ಸಿನಿಮಾದಲ್ಲಿ ಪ್ರಧಾನ ಮಂತ್ರಿ ಪರವಾದ ಅಂಶಗಳಿವೆ. ವಿರೋಧ ಪಕ್ಷದವರನ್ನು ಹಗುರವಾಗಿ ತೋರಿಸಲಾಗಿದೆ ಎಂದು ಸಿನಿಮಾ ವೀಕ್ಷಿಸಿದ ಚುನಾವಣಾ ಆಯೋಗ ಅಭಿಪ್ರಾಯಪಟ್ಟಿತ್ತು. ಉಳಿದಂತೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿದೆ. ಇಂತಹ ವೇಳೆ ರಾಜಕೀಯ ಪ್ರೇರಿತ ವಿಷಯವನ್ನುಳ್ಳ ಸಿನಿಮಾಗಳು ಬಯೋಪಿಕ್‌ಗಳನ್ನುಬಿಡುಗಡೆ ಮಾಡದಂತೆ ತಡೆನೀಡಬೇಕೆಂದು ಸುಪ್ರೀಂಗೆ ಮನವಿ ಮಾಡಿತು. ಮುಂದಿನ ಆದೇಶದವರೆಗೂ ಸಿನಿಮಾ ಪ್ರದರ್ಶಿಸಿದಂತೆ ನಿರ್ಮಾಪಕರಿಗೂ ಸಹ ಸೂಚಿಸಿತ್ತು.
ಆದರೆ ಚಿತ್ರನಿರ್ಮಾಪಕ ಆಯೋಗವು ಸಿನಿಮಾ ತಡೆಗಾಗಿ ಸಲ್ಲಿಸಿರುವ ವರದಿ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ ಉಲ್ಲಂಘನೆಯೆಂದು ತನ್ನ ಅರ್ಜಿಯಲ್ಲಿ ಉಲ್ಲೇಖಿಸುವ ಮೂಲಕ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿತ್ತು. ಆದರೆ ಚುನಾವಣಾ ಆಯೋಗ, ಸಿನಿಮಾ ಚುನಾವಣೆ ಮೇಲೆ ಪರಿಣಾಮ ಬೀರುವುದೋ ಇಲ್ಲವೋ ಎನ್ನುವುದನ್ನು ಆಯೋಗ ನಿರ್ಧರಿಸುತ್ತದೆ. ಸಿನಿಮಾ ನೋಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.