janadhvani

Kannada Online News Paper

‘ಭಾರತದ ಸಂವಿಧಾನವನ್ನು ಗೌರವಿಸಿ,ಸಾರ್ವಭೌಮತ್ವವನ್ನು ಎತ್ತಿ ಹಿಡಿಯುತ್ತೇನೆ’ : ಮೋದಿ ನಾಮ ಪತ್ರ ಸಲ್ಲಿಕೆ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಗುರುವಾರ ಸಂಜೆ ಮತ್ತು ಶುಕ್ರವಾರ ಬೆಳಗ್ಗೆ ಬೃಹತ್‌ ರೋಡ್‌ ಶೋಗಳನ್ನು ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಎರಡನೇ ಬಾರಿ ಲೋಕಸಭೆಗೆ ವಾರಾಣಸಿಯಿಂದ ಆಯ್ಕೆ ಬಯಸಿ ಮೋದಿ ಉಮೇದುವಾರಿಕೆ ಸಲ್ಲಿಸಿದರು.ಲೋಕಸಭೆಯಲ್ಲಿ ಒಂದು ಸ್ಥಾನ ತುಂಬಿಸುವುದಕ್ಕಾಗಿ ನಾನು ಬಿಜೆಪಿ ಪಕ್ಷದಿಂದ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ.

ಸತ್ಯ, ನಿಷ್ಠೆ ಮತ್ತು ಭಾರತದ ಸಂವಿಧಾನಕ್ಕೆ ಗೌರವಿಸಿ, ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುತ್ತೇನೆ ಎಂದು ನಾಮಪತ್ರ ಸಲ್ಲಿಕೆ ವೇಳೆ ನರೇಂದ್ರ ಮೋದಿ ಶಪಥ ಮಾಡಿದರು. ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡ ಬಳಿಕ ಕಚೇರಿಯೊಳಗಿದ್ದ ಎಲ್ಲ ಅಧಿಕಾರಿಗಳಿಗೆ, ಸೂಚಕರಾಗಿ ಸಹಿ ಮಾಡಿದವರಿಗೆ ಧನ್ಯವಾದ ಸಮರ್ಪಿಸಿ, ಕುಶಲೋಪರಿ ವಿಚಾರಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವ ರಾಜನಾಥ್‌ ಸಿಂಗ್‌, ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಮತ್ತಿತರರು ಸಾಥ್‌ ನೀಡಿದರು.

error: Content is protected !! Not allowed copy content from janadhvani.com