ಮಕ್ಕಾ: ಮಕ್ಕಾದಲ್ಲಿ ಈ ಬಾರಿಯ ಹಜ್ ಯಾತ್ರಾರ್ಥಿಗಳ ವಾಸಕ್ಕಾಗಿ ಅರ್ಜೀ ಸಲ್ಲಿಸಲಾದ ಕಟ್ಟಡಗಳಲ್ಲಿ ಹಜ್-ಉಮ್ರಾ ಸಚಿವಾಲಯ ತಪಾಸಣೆ ಆರಂಭಿಸಿದೆ. ಸುರಕ್ಷೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಈ ಬಾರಿ ತಪಾಸಣೆ ನೀಡಲಾಗುತ್ತಿದೆ. ಯಾತ್ರಾರ್ಥಿಗಳಿಗೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ಖಚಿತಪಡಿಸಿದ ನಂತರ ಮಾತ್ರ ಕಟ್ಟಡಗಳಿಗೆ ಪರವಾನಗಿ ನೀಡಲಾಗುವುದು.
ಸುರಕ್ಷೆ, ಶುಚಿತ್ವ, ಪ್ರಾಥಮಿಕ ಸೌಕರ್ಯಗಳು ಸೇರಿದಂತೆ ಹಜ್ ಯಾತ್ರಾರ್ಥಿಗಳಿಗೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ಹೊಂದಿರಬೇಕು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ತಪಾಸಣೆಯನ್ನು ಕಠಿಣ ಗೊಳಿಸಲಾಗಿದೆ.
ಕಳೆದ ವರ್ಷ ಕಟ್ಟಡದ ನಿರ್ಮಾಣದಲ್ಲಿನ ಈಡು ಮತ್ತು ಸುರಕ್ಷಿತೆಯನ್ನು ಮಾತ್ರ ತಪಾಸಣೆ ಮಾಡಲಾಗುತ್ತಿದ್ದವು. ಈ ಬಾರಿ ಪೇಪರ್ ಟವಲ್, ಡಸ್ಟ್ ಬಿನ್‌ಗಳು, ಬೆಡ್ ಶೀಟ್‌ಗಳು, ಪೀಠೋಪಕರಣ ಮುಂತಾದ ಎಲ್ಲಾ ಸಣ್ಣಪುಟ್ಟ ಕಾರ್ಯಗಳನ್ನೂ ತಪಾಸಣೆ ನಡೆಸಿ, ಖಾತರಿಪಡಿಸಿದ ನಂತರ ಮಾತ್ರ ಪರವಾನಗಿ ನೀಡಲಾಗುತ್ತದೆ.
ಆದ್ದರಿಂದಲೇ ತಪಾಸಣೆ ಪ್ರಕ್ರಿಯೆಗಳನ್ನು ಬೇಗನೇ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.