ಕೊಲಂಬೋ (ಏ.21): ಈಸ್ಟರ್ ಆಚರಣೆ ವೇಳೆ ಶ್ರೀಲಂಕಾದಲ್ಲಿ 6 ಸರಣಿ ಬಾಂಬ್ ಸ್ಫೋಟ ನಡೆದಿದೆ. ಇಲ್ಲಿನ ಮೂರು ಚರ್ಚ್ ಮತ್ತು ಎರಡು ಐಷಾರಾಮಿ ಹೋಟೆಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು 185 ಮಂದಿ ಸಾವನ್ನಪ್ಪಿದ್ದು, 450ಕ್ಕೂ ಅಧಿಕ ಮಂದಿಗೆ ತೀವ್ರವಾಗಿ ಗಾಯಾಗೊಂಡಿದ್ಧಾರೆ. ಇದರಲ್ಲಿ 35 ಮಂದಿ ಹೊರ ರಾಷ್ಟ್ರದವರಾಗಿದ್ದಾರೆ, ದಶಕಗಳಲ್ಲಿ ಶ್ರೀಲಂಕಾ ಕಂಡ ಅತಿ ಭಯಾನಕ ಉಗ್ರ ದಾಳಿ ಇದಾಗಿದೆ.
ಬಟ್ಟಿಕೊಲಾ ಚರ್ಚ್ ಸೇರಿ ಮೂರು ಚರ್ಚ್ಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸರಣಿ ಸ್ಫೋಟದ ಹಿಂದೆ ಉಗ್ರ ಸಂಘಟನೆ ಕೈವಾಡವಿದೆಯೇ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ. ಆತ್ಮಾಹುತಿ ದಾಳಿ ಕೋರರು ಈ ದಾಳಿ ನಡೆಸಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ಈಸ್ಟರ್ ಆಚರಣೆಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆದಿದೆ. ಈ ಸ್ಫೋಟದ ಹಿಂದೆ ಯಾರಿದ್ದಾರೆ ಎಂದು ಭೇದಿಸಲು ಪೊಲೀಸರು ಕಾರ್ಯಾಚರಣೆ ಚುರುಕು ಗೊಳಿಸಿದ್ದಾರೆ .