ದೋಹಾ: ಕತರ್‌ನಲ್ಲಿ ಅಪಾಯಕಾರಿ ವಸ್ತುಗಳನ್ನು ರಸ್ತೆಯ ಮೂಲಕ ಸಾಗಿಸುವುದಕ್ಕೆ ನಿಯಂತ್ರಣ ಏರ್ಪಡಿಸಲಾಗಿದೆ. ವಿವಿಧ ಸರ್ಕಾರಿ ಇಲಾಖೆಗಳಿಂದ ಸೂಕ್ಷ್ಮ ಪರಿಶೀಲನೆಯ ನಂತರ ಲಭಿಸುವ ಪರವಾನಗಿಗಳು ಇದ್ದರೆ ಮಾತ್ರ ಇಂತಹ ವಸ್ತುಗಳನ್ನು ಸಾಗಿಸಬಹುದಾಗಿದೆ.
ರಸ್ತೆ ಸಾರಿಗೆ ನಿಯಂತ್ರಣಕ್ಕೆ ಸಂಬಂಧಿಸಿದ 2019 ರ 8ನೇ ಕಾನೂನು ಮತ್ತು ಅಪಾಯಕಾರಿ ವಸ್ತುಗಳನ್ನು ರಸ್ತೆ ಮೂಲಕ ಸಾಗಿಸುವುದಕ್ಕೆ ಸಂಬಂಧಿಸಿದ 9ನೇ ಕಾನೂನನ್ನು ಜಾರಿಗೊಳಿಸಲು ಅಮೀರರು ಅಂಗೀಕಾರ ನೀಡಿದ್ದಾರೆ. ಈ ಮೂಲಕ ಅಪಾಯಕಾರಿ ವಸ್ತುಗಳನ್ನು ರಸ್ತೆ ಮೂಲಕ ಸಾಗಿಸಲು ಪರವಾನಗಿ ಪಡೆದ ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
ವಿವಿಧ ಸರಕಾರಿ ಇಲಾಖೆಗಳ ಪರೀಕ್ಷೆಯ ನಂತರ ಮಾತ್ರ ಈ ಪರವಾನಗಿ ನೀಡಲಾಗುತ್ತದೆ. ನಾಗರಿಕ ರಕ್ಷಣೆ ಮತ್ತು ಗೃಹ ಸಚಿವಾಲಯವು ಪ್ರಸ್ತಾಪಿಸಿದ ರಸ್ತೆಗಳ ಮೂಲಕ ಮಾತ್ರವೇ ಇಂತಹ ವಸ್ತುಗಳನ್ನು ಸಾಗಿಸಬಹುದು. ಅಧಿಕಾರಿಗಳು ಲೋಡ್ ಅಥವಾ ಅನ್ಲೋಡ್ ಮಾಡುವ ವೇಳೆ ಸುರಕ್ಷಾ ಕಾರ್ಯಗಳನ್ನು ಖಚಿತಪಡಿಸಿಕೊಳ್ಳಬೇಕು. ಪರವಾನಗಿ ಇಲ್ಲದ ಸರಕುಗಳನ್ನು ಸಾಗಿಸುವುದು ನಿಷೇಧಿಸಲಾಗಿದ್ದು, ಸಾರಿಗೆ ಮತ್ತು ಸಂಪರ್ಕ ಸಚಿವಾಲಯ ಎರಡು ಕಾನೂನುಗಳನ್ನು ರಚಿಸಿದೆ.