janadhvani

Kannada Online News Paper

ಎಪ್ರಿಲ್ 11 ರಿಂದ ಎಸ್ಸೆಸ್ಸೆಫ್ ನಿಂದ ಓರ್ಬಿಟ್ ಕೆರಿಯರ್ ಗೈಡೆನ್ಸ್ ಕಾರ್ಯಾಗಾರ

ಮಂಗಳೂರು: ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಹಾಗೂ ಕ್ಯಾಂಪಸ್ ಸಮಿತಿಗಳ ವತಿಯಿಂದ ಓರ್ಬಿಟ್ ಕೆರಿಯರ್ ಗೈಡನ್ಸ್ ಕಾರ್ಯಾಗಾರ ನಡೆಯಲಿದೆ.

ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಓರ್ಬಿಟ್ ಕೆರಿಯರ್ ಗೈಡನ್ಸ್ ಕಾರ್ಯಾಗಾರವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿ.ಟಿ.ಎಂ.ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್ ರವರ ನೇತೃತ್ವದಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ಡಿವಿಷನ್ ಕೇಂದ್ರಗಳಲ್ಲಿ ಎಪ್ರಿಲ್ 11 ರಿಂದ 25 ರೊಳಗಾಗಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.