ಕೋಲ್ಕತ್ತಾ,ಏ.8: ದೇಶದಲ್ಲಿ ಸುಳ್ಳು ಹೇಳುವ ಸ್ಪರ್ಧೆಗೆ ಪ್ರಶಸ್ತಿ ನೀಡುವುದಾದರೆ ನರೇಂದ್ರ ಮೋದಿ ಅವರಿಗೆ ಪ್ರಥಮ ಬಹುಮಾನ ನೀಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಹಿತಾಸಕ್ತಿ ದೃಷ್ಟಿಯಿಂದಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಕುರ್ಚಿಯಿಂದಲ್ಲ ರಾಜಕೀಯ ಜೀವನದಿಂದಲೇ ಹೊರ ಹೋಗುವಂತೆ ಮಾಡಬೇಕಿದೆ ಎಂದು ಮಮತಾ ಕಿಡಿಕಾರಿದರು.
ಇಂದು ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾಲ್ಕೂವರೆ ವರ್ಷ ನರೇಂದ್ರ ಮೋದಿ ಅವರಿಗೆ ಈ ದೇಶದ ರೈತರು ನೆನಪಾಗಲಿಲ್ಲ. ಮಧ್ಯಮ ವರ್ಗದ ಕಷ್ಟಗಳು ಅರಿವಾಗಲಿಲ್ಲ. ವಿದೇಶಗಳಲ್ಲಿ ಪ್ರವಾಸ ಮಾಡುವುದರಲ್ಲೇ ಅವರು ಹೆಚ್ಚು ಸಮಯ ಕಳೆದರು.
ಚುನಾವಣೆ ಬಂದು ಬಾಗಿಲು ಬಡಿದಾಗ ಇದ್ದಕ್ಕಿದ್ದ ಹಾಗೆ ಮೋದಿ ಅವರಿಗೆ ದೇಶ ನೆನಪಾಗಿದೆ. ತಮ್ಮ ಸುಳ್ಳುಗಳ ಮೂಲಕ ವಿರೋಧ ಪಕ್ಷಗಳನ್ನು ಜರಿದು ಅಭಿವೃದ್ಧಿಯಾಗದೇ ಇರುವುದಕ್ಕೆ ವಿಪಕ್ಷಗಳನ್ನೇ ಗುರಿ ಮಾಡಿದ್ದಾರೆ ಮತ್ತು ವಿವಿಧ ರೀತಿಯ ಬೆದರಿಕೆಗಳನ್ನು ಒಡ್ಡುವ ಪ್ರಯತ್ನ ಮಾಡಿದರು.
ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಕಷ್ಟ ಕೇಳದ ಮೋದಿ ಅವರು ನೋಟು ಅಮಾನೀಕರಣದಿಂದ ಜನರು ತೊಂದರೆಯಲ್ಲಿದ್ದಾಗ ನೆರವಿಗೆ ಬಾರದ ಮೋದಿ ಅವರು ಸುಳ್ಳಿನ ಭಾಷಣ ಮಾಡುವ ಮೂಲಕ ಜನರನ್ನು ವಂಚಿಸಲು ಸಾಧ್ಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರೆಕ್ಟ್ ಹೇಳಿದ್ದೀರಿ, ಮೇಡಂ
Ninnanthaha kachradavalige modiye sari.jai modiji