ಕುವೈಟ್ ಸಿಟಿ: ಇಸ್ರೇಲ್ ಉತ್ಪನ್ನಗಳನ್ನು ಇರಿಸುವುದು ಮತ್ತು ಮಾರಾಟ ಮಾಡುವುದು ಅಪರಾಧ ಎಂದು ಕುವೈತ್‌ನ ಕೋರ್ಟ್ ಹೇಳಿದೆ. ಕುವೈತ್‌ನಲ್ಲಿ ವಿದೇಶೀ ವ್ಯಕ್ತಿಯೊಬ್ಬ ಇಸ್ರೇಲ್ ನಿರ್ಮಿತ ಉತ್ಪನ್ನಗಳ ಮಾರಾಟ ಮಾಡಿದ ವಿಷಯಕ್ಕೆ ಸಂಬಂದಿಸಿದಂತೆ ಸಲ್ಲಿಸಲಾದ ಅರ್ಜಿಗೆ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.
ಇಸ್ರೇಲ್ನೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿರದ ದೇಶವಾದ ಕುವೈತ್‌ನಲ್ಲಿ ಇದಕ್ಕೆ ವ್ಯತಿರಿಕ್ತವಾಗಿ, ಇಸ್ರೇಲ್ ಅಥವಾ ಅಲ್ಲಿನ ಉತ್ಪನ್ನಗಳಿಗೆ ಲಾಭ ಉಂಟುಮಾಡಬಲ್ಲ ಚಟುವಟಿಕೆಗಳಲ್ಲಿ ಯಾರಾದರೂ ತೊಡಗಿಸಿಕೊಂಡರೆ ಅದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಖಾಸಗಿ ಕಂಪನಿಯ ನಿರ್ದೇಶಕ ವಿದೇಶೀ ವ್ಯಕ್ತಿಯೊಬ್ಬ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡುತ್ತಾ, ಇದು ಮೊದಲ ಪ್ರಕರಣವಾದ ಕಾರಣ ಆತನನನ್ನು ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವುದಿಲ್ಲ ಎನ್ನುವ ಬರವಸೆಯೊಂದಿಗೆ ಉತ್ತಮ ನಡತೆಗಾಗಿ ಬಿಟ್ಟು ಬಿಡಲು ಮತ್ತು ಇಸ್ರೇಲಿ ಉತ್ಪನ್ನಗಳನ್ನು ಮುಟ್ಟುಗೋಲು ಗೊಳಿಸಲು ಆದೇಶಿಸಿದೆ.