janadhvani

Kannada Online News Paper

ಕೆಸಿಎಫ್ ಒಮಾನ್, ಫಲಜ್ ಸೆಕ್ಟರ್ ಮಹಾಸಭೆ

ಕೆಸಿಎಫ್ ಒಮಾನ್ ಸೊಹಾರ್ ಝೋನ್ ಇದರ ಅಧೀನದಲ್ಲಿ ಕಾರ್ಯಚರಿಸಿತ್ತಿರುವ ಫಲಜ್ ಸೆಕ್ಟರ್ ಇದರ ಮಹಾಸಭೆಯು ಇತ್ತೀಚೆಗೆ ಅಧ್ಯಕ್ಷ ಮುನೀರ್ ಕುತ್ತಾರ್ ಇವರ ಅಧ್ಯಕ್ಷತೆಲ್ಲಿ ಇಕ್ಬಾಲ್ ಎರ್ಮಾಳ್ ನಿವಾಸದಲ್ಲಿ ಜರುಗಿತು.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಸೊಹಾರ್ ಝೋನ್ ಕೊಶಾಧಿಕಾರಿ ಇಕ್ಬಾಲ್ ಎರ್ಮಾಲ್ ,ರಾಷ್ಟ್ರೀಯ ಸಮಿತಿಯ ಸದಸ್ಯ ಹಾರಿಸ್ ಕೊಡಗು , ಸೊಹಾರ್ ಝೋನ್ ಅಧ್ಯಕ್ಷ ಆರಿಫ್ ಮದಕ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫಲಜ್ ಸೆಕ್ಟರ್ ನೂತನ ಅಧ್ಯಕ್ಷರಾಗಿ ಸಿರಾಜುದ್ದೀನ್ ಮುಈನಿ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಎಲಿಮಲೆ, ಕೋಶಾದಿಕಾರಿ ರಝಾಕ್ ಬೆಳ್ಳಾರೆ, ಶಿಕ್ಷಣ ವಿಭಾಗದ ಚಯರ್ಮೆನ್ ಹಾರಿಸ್ ಝುಹ್ರಿ, ಶಿಕ್ಷಣ ವಿಭಾಗದ ಕನ್ವೀನರ್ ಮುಬೀನ್ ಜೊಕಟ್ಟೆ, ಸಾಂತ್ವನ ವಿಭಾಗದ ಚೆಯರ್ಮೆನ್ ಫಾರೂಕ್ ಕೃಷ್ಣಾಪುರ, ಕನ್ವೀನರ್ ಝಾಕಿರ್ ಕಾವೂರು, ಪ್ರಕಾಶನ ವಿಭಾಗದ ಚೆಯರ್ಮೆನ್ ನಝೀರ್ ಸಾರ್ಯ, ಕನ್ವೀನರ್ ಆಗಿ ನಿಝಾಂ ಮಲ್ಲೂರು, ಇಶಾರ ಇದರ ಚೆಯರ್ಮೆನ್ ಆಗಿ ಮುಸ್ತಫ ಕುಂದಾಪುರ, ಹಾಗೂ ಝೋನ್ ಕೌನ್ಸಿಲರುಗಳಾಗಿ ಇಕ್ಬಾಲ್ ಎರ್ಮಾಳ್, ಸಾದಿಕ್ ಕಾಟಿಪಳ್ಳ, ಆರಿಫ್ ಮದಕ, ಮುನೀರ್ ಕುತ್ತಾರ್, ಅಝೀಝ್ ಪರ್ಕೋಡಿ, ಮಝೀರ್ ಬಜ್ಪೆ ,ಫಾರೂಕ್ ಕೃಷ್ಣಾ ಪುರ, ನಝೀರ್ ಸಾರ್ಯ, ನಾಸಿರ್ ಪಡುಬಿದ್ರಿ ಇವರುಗಳನ್ನು ಆಯ್ಕೆ ಮಾಡಲಾಯಿತು .

ಕಾರ್ಯದರ್ಶಿ ಸಿರಾಜುದ್ದೀನ್ ಮುಈನಿ ಸ್ವಾಗತಿಸಿ ಸೊಹಾರ್ ಝೋನ್ ಕಾರ್ಯದರ್ಶಿ ಅಶ್ರಫ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಶಫೀಕ್ ಎಲಿಮಲೆ ವಂಧಿಸಿದರು.